ಪುತ್ತೂರು: ಇಲ್ಲಿನ ಲಾಡ್ಜ್ ಒಂದರಲ್ಲಿ ರೂಮ್ ಪಡೆದು ತಂಗಿದ್ದ ವ್ಯಕ್ತಿಯೋರ್ವರು ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಜು.8ರಂದು ಸಂಜೆ ಪತ್ತೆಯಾಗಿದೆ.
ತಂಪು ಪಾನೀಯದ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ್(40ವ.)ಮೃತಪಟ್ಟವರು. ಈ ಹಿಂದೆ ಮಧುರಾ ಸ್ವೀಟ್ಸ್ ಸ್ಟಾಲ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದರು.
ಶ್ರೀನಿವಾಸ್‌ರವರು ಕೆಲವೊಮ್ಮೆ ಮನೆಗೆ ಹೋಗದೆ ಲಾಡ್ಜ್‌ನಲ್ಲಿ ತಂಗುತ್ತಿದ್ದರು. 2 ದಿನಗಳ ಹಿಂದೆ ಲಾಡ್ಜ್‌ವೊಂದರಲ್ಲಿ ಕೊಠಡಿ ಪಡೆದುಕೊಂಡು ತಂಗಿದ್ದ ಅವರು ಕೊಠಡಿಯ ಒಳಗೆ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.