ಪುತ್ತೂರು: ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ಸುಳ್ಯ ಶಾಖೆಯಲ್ಲಿ ಜು. 9 ರಂದು ಉಚಿತ ಎಫ್.ಡಿ.ಎ/ಎಸ್.ಡಿ.ಎ/ಪಿಡಿಒ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಪೂರಕವಾದ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕೆ.ಡಿ ಸಿಂಧೆ ವಿಜಯಪುರ ಇವರು ಭಾಗವಹಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಪರೀಕ್ಷಾ ಪರಿವಿಡಿ, ಯಾವ ರೀತಿ ತಯಾರು ಮಾಡಬೇಕು ಮತ್ತು ಅಣುಕು ಪರೀಕ್ಷೆಗಳನ್ನು ನಡೆಸಿದರು.
ತರಬೇತಿ ಕಾರ್ಯಾಗಾರದಲ್ಲಿ ಪುತ್ತೂರು,ಸುಳ್ಯ,ಮಡಿಕೇರಿ, ಕಾಸರಗೋಡು ಮತ್ತು ಕಡಬ ತಾಲೂಕುಗಳ 53 ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಗಣೇಶ್ ಕೈಂದಾಡಿಯವರು ಸಂಪನ್ಮೂಲ ವ್ಯಕ್ತಿಗಳನ್ನು ಸ್ವಾಗತಿಸಿದರು. ಪ್ರಫುಲ್ಲ ಗಣೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ನಿಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿ, ಹರ್ಷಿತಾ ವಂದಿಸಿದರು.