ಉಡುಪಿ: ಹಸುವೊಂದು ಅಟ್ಟಿಸಿಕೊಂಡು ಬಂದು ಬೈಕ್ ಗೆ ತಿವಿದ ಪರಿಣಾಮ ಬೈಕ್ ಸವಾರನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಬಳಿ ನಡೆದಿದೆ.


ಗಾಯಗೊಂಡ ಸವಾರನನ್ನು ಪರ್ಕಳದ ನಿವಾಸಿ 25 ವರ್ಷದ ಶೈಲೇಶ್ ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸ್ಥಳೀಯರ ಸಹಕಾರದಿಂದ ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.




