ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಬಾಲಕ ಸಾವು

Share with

ಮೃತ ಬಾಲಕ ಆಶಿಶ್ ಡಿಸೋಜಾ

ಮಂಗಳೂರು: ಡೆಂಗ್ಯೂ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಂಗಳೂರಿನ ಅತ್ತಾವರದ ಬಾಲಕನೋರ್ವ ಹೃದಯ ಸ್ತಂಭನದಿಂದ ಮೃತಪಟ್ಟ ಘಟನೆ ನಡೆದಿದೆ.

ಮೃತ ಬಾಲಕನನ್ನು 8 ನೇ ತರಗತಿಯಲ್ಲಿ ಕಲಿಯುತ್ತಿದ್ದ ಆಶಿಶ್ ಡಿಸೋಜಾ(13) ಎಂದು ಗುರುತಿಸಲಾಗಿದ್ದು, ಅತ್ತಾವರದ ಅಲ್ಫೋನ್ಸ್ ಡಿಸೋಜಾ ಹಾಗೂ ಸೋನಿಯಾ ಡಿಸೋಜಾ ದಂಪತಿಗಳ ಪುತ್ರನಾಗಿದ್ದಾನೆ.

ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಆಶಿಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿರುವಂತೆಯೇ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ.

ಸದಾ ಚುರುಕುತನದಿಂದ ಇದ್ದ ಆಶಿಶ್ ಚರ್ಚ್ ನ ಬಲಿಪೀಠ ಸೇವಾ ಸಂಘದ ಸದಸ್ಯನಾಗಿದ್ದರು. ಪುತ್ರನನ್ನು ಅಗಲಿದ ನೋವಿನಲ್ಲಿ ಹೆತ್ತವರು ‌ಅಂಗಾಂಗ ದಾನ ಮಾಡಿ ಹಲವರ ಬಾಳಿಗೆ ಬೆಳಕಾಗಲು ಮುಂದಾಗಿ ಸಾರ್ಥಕತೆ ಮರೆದಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *