ಮಾಣಿ: ರಾಷ್ಟ್ರೀಯ ಹೆದ್ದಾರಿಯ ತಡೆಬೇಲಿಗೆ ಕಾರು ಡಿಕ್ಕಿ: ನಜ್ಜು ಗುಜ್ಜಾದ ಕಾರು

Share with

ವಿಟ್ಲ: ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಕಂಪೆನಿಯು ರಸ್ತೆಗೆ ಬ್ಯಾರಿಕೇಡ್ ತರಹ ಉದ್ದಕ್ಕೆ ನಿರ್ಮಿಸಿದ ಕಬ್ಬಿಣದ ತಡೆಬೇಲಿಗೆ ಬುಧವಾರ ಬೆಳಗ್ಗಿನ ಕಾರೊಂದು ಡಿಕ್ಕಿ ಹೊಡೆದು ಸಂಪೂರ್ಣವಾಗಿ ಜಖಂಗೊಂಡಿದೆ. ಘಟನೆಯಲ್ಲಿ ಗಾಯಗೊಂಡವರ ಮಾಹಿತಿ ಲಭ್ಯವಾಗಿಲ್ಲ.

ಬೆಳಗ್ಗಿನ ಜಾವ ಅತೀವೇಗದಿಂದ ಬಂದ ಕಾರು ಗುದ್ದಿದ ಕಾರಣ ತಡೆಬೇಲಿ ಮತ್ತು ಕಾರು ನಜ್ಜುಗುಜ್ಜಾಗಿದೆ. ಈ ತಡೆಬೇಲಿ ಪರ್ಮನೆಂಟ್ ಆಗಿದ್ದು ಇದರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಅಷ್ಟೇ, ನಿರ್ಮಾಣ ಕಾರ್ಯ ನೋಡಿಯೇ ಸಾರ್ವಜನಿಕರು ಇದು ಉಳಿಯಬಹುದಾ, ಇದನ್ನು ವೇಗವಾಗಿ ಬರುವ ಗಾಡಿಗಳು ಸೀಳಿಕೊಂಡು ಹೋಗಬಹುದು ಎಂದು ಮಾತಾಡಿಕೊಂಡಿದ್ದರು.
ಅದರಂತೆ ಇಂದು ಬೆಳಗ್ಗಿನ ಜಾವ ಘಟನೆ ನಡೆದಿದ್ದು ಉತ್ತಮ ಗುಣಮಟ್ಟದ ಕಾಂಕ್ರೀಟ್ ಬೇಲಿ ನಿರ್ಮಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *