ಟಿ-20 ವಿಶ್ವಕಪ್: ಭಾರತ-ಪಾಕಿಸ್ತಾನ ಪಂದ್ಯಕ್ಕೆ ಉಗ್ರರ ಬೆದರಿಕೆ ಕರೆ

Share with

ನ್ಯೂಯಾರ್ಕ್‌/ ಮಂಗಳೂರು: ವಿಶ್ವವೇ ಎದರು ನೋಡುತ್ತಿರುವ ಟಿ-20 ವಿಶ್ವಕಪ್‌ ಕ್ರಿಕೆಟ್ ಪಂದ್ಯಾಟ ಜೂ.2ರಿಂದ ಆರಂಭವಾಗಲಿದ್ದು ಜೂ.20ರಂದು ಕೊನೆಗೊಳ್ಳಲಿದೆ. ಒಟ್ಟು 20 ತಂಡಗಳು ಕಣಕ್ಕಿಳಿಯಲಿದ್ದು, ಈಗಾಗಲೇ ಭಾರತ ತಂಡ ವಿಶ್ವಕಪ್‌ಗಾಗಿ ತೆರಳಿದೆ.

ಆದರೆ ಟೀ 20 ವಿಶ್ವಕಪ್ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟಕ್ಕೆ ಉಗ್ರ ಸಂಘಟನೆಯಿಂದ ಬೆದರಿಕೆ ಕರೆ ಬಂದಿರುವುದಾಗಿ ಅಮೆರಿಕಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಲೋನ್‌ ವುಲ್ಫ್’ ಎಂಬ ಸಂಘಟನೆಯು ಐರಿಸ್‌ ಸಂಘಟನೆ ಜೊತೆ ಗುರುತಿಸಿಕೊಂಡಿದ್ದು ಭಾರತ-ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಪಂದ್ಯಾಟದಂದು ದಾಳಿ ಮಾಡುವುದಾಗಿ ಬೆದರಿಕೆ ನೀಡಿದೆ. ಇನ್ನು ಬೆದರಿಕೆ ಕುರಿತಾದ ಹೇಳಿಕೆಯ ವೀಡಿಯೋ ಪ್ರಸಾರವಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಜೂ.9 ರಂದು ಐಸೆನೋವಾರ್ ಪಾರ್ಕ್‌ನಲ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜೂ.9 ರಂದು ಪಂದ್ಯ ನಡೆಯಲಿದೆ. ಬೆದರಿಕೆ ಕರೆ ಹಿನ್ನೆಲೆಯಲ್ಲಿ ನಗರದ ಗವರ್ನರ್ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿ ಬಿಗಿ ಬಂದೋಬಸ್ತ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


Share with

Leave a Reply

Your email address will not be published. Required fields are marked *