ಯುಕೋ ಬ್ಯಾಂಕ್​ ಖಾತೆದಾರರಿಗೆ ತಪ್ಪಾಗಿ ₹820 ಕೋಟಿ ಜಮೆ ಪ್ರಕರಣ: ಮಂಗಳೂರು ಸೇರಿ ಹಲವು ಕಡೆ ಸಿಬಿಐ ಶೋಧ

Share with

ಮಂಗಳೂರು: ಯುಕೋ ಬ್ಯಾಂಕ್​ನ ಖಾತೆದಾರರಿಗೆ 820 ಕೋಟಿ ರೂ. ಜಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸೇರಿ ದೇಶದ ಹಲವಡೆ ಸಿಬಿಐ ದಾಳಿ ನಡೆಸಿದೆ. ಮಂಗಳೂರು, ಕೋಲ್ಕತ್ತಾ ಸೇರಿದಂತೆ 13 ಕಡೆ ದಾಳಿ ಮಾಡಿದೆ ಎಂದು ಸಿಬಿಐ ಹೇಳಿದೆ.

ನವೆಂಬರ್​ ತಿಂಗಳಲ್ಲಿ ಐಎಂಪಿಎಸ್ ಮೂಲಕ ಯುಕೋ ಬ್ಯಾಂಕ್​ನ 41 ಸಾವಿರ ಖಾತೆದಾರರಿಗೆ 820 ಕೋಟಿ ರೂಪಾಯಿಗಳ ಹಣ ಜಮೆ ಆಗಿತ್ತು ಎಂದು ಆರೋಪಿಸಲಾಗಿತ್ತು. ಬ್ಯಾಂಕ್​ನೊಂದಿಗೆ ಕಾರ್ಯನಿರ್ವಹಿಸುವ ಇಬ್ಬರು ಇಂಜಿನಿಯರ್​ಗಳು ಹಾಗೂ ಇತರರ ವಿರುದ್ಧ ಯುಕೋ ಬ್ಯಾಂಕ್​ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿ ಸಿಬಿಐ ತನಿಖೆ ನಡೆಸಿದೆ.

ನ.10 ಮತ್ತು 13ರ ಮಧ್ಯೆ 8.53 ಲಕ್ಷಕ್ಕೂ ಹೆಚ್ಚು ಐಎಂಪಿಎಸ್ ವಹಿವಾಟು ಆಗಿದೆ. ಯುಕೋ ಬ್ಯಾಂಕ್​ನ ಹಲವಾರು ಗ್ರಾಹಕರು ಈ ವಹಿವಾಟಿನ ಲಾಭ ಪಡೆದು ಮೊತ್ತವನ್ನು ವಿಥ್‌ಡ್ರಾ ಮಾಡಿಕೊಂಡಿದ್ದಾರೆ. ಹೀಗಾಗಿ ಮಂಗಳೂರು ಸೇರಿ ಹಲವು ಯುಕೋ ಬ್ಯಾಂಕ್ ಶಾಖೆಗಳಿಗೆ ದಾಳಿ ಮಾಡಿದೆ.

ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ದಾಖಲೆಗಳು ವಶ ಪಡೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *