ಮಂಗಳೂರು ವಿವಿ ಉಪಕುಲಪತಿ ನಡೆ ಖಂಡಿಸಿ ಅಸೈಗೋಳಿ ಮೈದಾನದಲ್ಲಿ ಭಜನೆ ಮೂಲಕ ಬೃಹತ್‌ ಪ್ರತಿಭಟನೆ

Share with

ಮಂಗಳೂರು: ಮಂಗಳೂರು ವಿವಿ ಉಪಕುಲಪತಿ ನಡೆ ಖಂಡಿಸಿ ಮಂಗಳೂರಿನ ಅಸೈಗೋಳಿ ಮೈದಾನದಲ್ಲಿ ಭಜನೆ ಮೂಲಕ ಬೃಹತ್‌ ಪ್ರತಿಭಟನೆ ನಡೆಯುತ್ತಿದ್ದು, ಆರ್.ಎಸ್.ಎಸ್‌ ಮುಖಂಡರಾದ ಪ್ರಭಾಕರ್‌ ಭಟ್‌ ಸೇರಿ ಹಲವಾರು ಭಾಗಿಯಾಗಿದ್ದಾರೆ.
ಸಂಘಪರಿವಾರದ ಹಲವು ಸಂಘಟನೆಗಳು ದೇವರಿಗೆ ಪ್ರಾರ್ಥನೆ ಹಾಗೂ ಭಜನೆ ಸಲ್ಲಿಸುವ ಮೂಲಕ ಪ್ರತಿಭಟಿಸುತ್ತಿದ್ದಾರೆ.

ವಿವಿ ಉಪಕುಲಪತಿ ಜಯರಾಜ್‌ ಆಮೀನ್‌ ಅವರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರಲಿಲ್ಲ. ಇದರಿಂದ ಭುಗಿಲೆದ್ದ ವಿವಾದದ ಬಳಿಕ ಹಾಸ್ಟೆಲ್‌ ವಾರ್ಡನ್‌ ರವರ ಮಾರ್ಗದರ್ಶನದಲ್ಲಿ ಗಣೇಶೋತ್ಸವ ನಡೆಸಲು ಕಂಡೀಷನ್‌ ಮೂಲಕ ಅನುಮತಿ ನೀಡಿದ್ದರು. ಹಲವು ವರ್ಷಗಳಿಂದ ಮಂಗಳೂರಿನ ಕೊಣಾಜೆ ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ಆಚರಣೆ ನಡೆಸಲಾಗುತ್ತಿದ್ದು, ಆದರೆ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧಾರ್ಮಿಕ ಕಾರ್ಯಕ್ರಮ ಆಚರಿಸದಂತೆ ಮೌಖಿಕ ಆದೇಶ ನೀಡಿದ್ದು, ಆದರಿಂದ ವಿವಿ ಉಪಕುಲಪತಿ ಜಯರಾಜ್‌ ಆಮೀನ್‌ ಅವರು ಅನುಮತಿ ನೀಡಿರಲಿಲ್ಲ. ಈ ಬಗ್ಗೆ ಉಪಕುಲಪತಿ ಜಯರಾಜ್‌ ಆಮೀನ್‌ ಅವರು ಸರ್ಕಾರಕ್ಕೆ ಪತ್ರವನ್ನು ಕೂಡ ಬರೆದಿದ್ದಾರೆ.
ಈ ಎಲ್ಲಾ ರೀತಿಯ ನಡವಳಿಕೆಗಳನ್ನು ಖಂಡಿಸಿ ಸಂಘ-ಪರಿವಾರದವರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *