ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

Share with

ಕಾಸರಗೋಡು: ಜಿಲ್ಲೆಯ ರಾಣಿಪುರದ ದಟ್ಟ ಅಡವಿಯಲ್ಲಿ ರಾತ್ರಿ ಹೊತ್ತಿನಲ್ಲಿ ಹಸುರು ಬಣ್ಣದಲ್ಲಿ ಹೊಳೆಯುವ ಅತೀ ಅಪರೂಪದ ಹಾಗೂ ಪ್ರಕೃತಿ ವಿಸ್ಮಯವಾಗಿರುವ ಅಣಬೆಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ವೈಜ್ಞಾನಿಕವಾಗಿ ಫಿಲೋಟೊಲೆಟಸ್ ಮ್ಯಾನಿಪುಲಾರಿಸ್ ಎಂದು ಕರೆಯುಲ್ಪಡುವ ಈ ಶಿಲೀಂದ್ರಗಳು ಜೀವ ರಾಸಾಯನಿಕ ಪ್ರಕ್ರಿಯೆಯ ಮೂಲಕ ಬೆಳಕನ್ನು ಚಿಮ್ಮುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಕೇರಳ ಅರಣ್ಯ ಮತ್ತು ವನ್ಯ ಜೀವಿ ಇಲಾಖೆಯ ಕಾಸರಗೋಡು ವಿಭಾಗ ಮತ್ತು ಮಶೂಮ್ಸ್ ఆటో ಇಂಡಿಯಾ ಕಮ್ಯೂನಿಟಿ ಜಂಟಿಯಾಗಿ ರಾಣಿಪುರದ ದಟ್ಟ ಅರಣ್ಯದಲ್ಲಿ ಮೈಕ್ರೋ ಫಂಗಲ್ ಸಮೀಕ್ಷೆಯ ಸಂದರ್ಭದಲ್ಲಿ ಈ ಜೈವಿಕವಾಗಿ ಪ್ರಕಾಶ ಬೀರುವ ಅಣಬೆ ಪತ್ತೆಯಾಯಿತು.


Share with

Leave a Reply

Your email address will not be published. Required fields are marked *