ಉಳ್ಳಾಲ: ಮೀನಿನ ಲಾರಿಗೆ ಸ್ಕೂಟರ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ರಾ.ಹೆ 66ರ ನೇತ್ರಾವತಿ ಸೇತುವೆಯಲ್ಲಿ ಅ.11 ರಂದು ನಸುಕಿನ ಜಾವ ನಡೆದಿದೆ.
ಮೃತ ಸವಾರನನ್ನು ಮೂಲತಃ ಉಳ್ಳಾಲ ನಿವಾಸಿ ಪ್ರಸಕ್ತ ಕೋಟೆಕಾರ್‌ನಲ್ಲಿ ನೆಲೆಸಿರುವ ಹನೀಫ್ ಎಂಬವರ ಪುತ್ರ ಅಝ್‌ವೀನ್ (21) ಎಂದು ಗುರುತಿಸಲಾಗಿದ್ದು, ದಕ್ಕೆಗೆ ಮೀನುಗಾರಿಕೆಯ ಕೆಲಸಕ್ಕೆಂದು ಅಝ್‌ವೀನ್ 3:30ರ ವೇಳೆಗೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ನೇತ್ರಾವತಿ ಸೇತುವೆಯಲ್ಲಿ ಮೀನಿನ ವಾಹನವೊಂದರ ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಲಾರಿ ಹಿಂಭಾಗದಲ್ಲಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಅಝ್‌ವೀನ್ ನಿಯಂತ್ರಣ ಕಳಕೊಂಡು ಮೀನು ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಗಂಭೀರ ಗಾಯಗೊಂಡಿದ್ದ ಅಝ್‌ವೀನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮದ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.