ಉಪ್ಪಳ: ಮಳೆಗೆ ಬೃಹತ್ ಮರ ಮುರಿದು ಬಿದ್ದು ನಿಲ್ಲಿಸಿದ್ದ ಎರಡು ಅಟೋರಿಕ್ಷಾ ಹಾಗೂ ಗೂಡಂಗಡಿ ಹಾನಿಗೊಂಡಿದ್ದು, ಸ್ಥಳೀಯರು ಅಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮಧ್ಯಾಹ್ನ ಸುಮಾರು ೨.೩೦ರ ವೇಳೆ ನಯಬಜಾರ್ನಲ್ಲಿರುವ ತಾಲೂಕು ಆಸ್ಪತ್ರೆ ಬಳಿಯ ಸರ್ವೀಸ್ ರಸ್ತೆ ಪರಿಸರದಲ್ಲಿ ಈ ಘಟನೆ ನಡೆದಿದೆ. ಅಂಬಾರು ನಿವಾಸಿ ಮೊಯಿದೀನ್ ಹಾಗೂ ಪಾರಕಟ್ಟೆ ನಿವಾಸಿ ಅಬ್ಬಾಸ್ ಎಂಬವರ ಅಟೋರಿಕ್ಷಾ ಹಾಗೂ ದಯಾನಂದ ಎಂಬವರ ಗೂಡಂಗಡಿ ಹಾನಿಗೊಂಡಿದೆ. ಮೊಯಿದೀನ್ ರವರ ರಿಕ್ಷಾ ಪೂರ್ತಿ ನುಜ್ಜಾಗಿದೆ. ಜೋರಾಗಿ ಮಳೆ ಹಾಗೂ ಗಾಳಿ ಈ ವೇಳೆ ಬೀಸಿರುವುದರಿಂದ ಮರ ಮುರಿದು ಬಿದ್ದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಇನ್ನಿತರ ಹಲವು ಅಟೋರಿಕ್ಷಾ , ಬೈಕ್ ಈ ಪರಿಸರದಲ್ಲಿ ನಿಲ್ಲಿಸಲಾಗಿತ್ತು ಅಪಾಯ ತಪ್ಪಿದೆ. ಸ್ಥಳಕ್ಕೆ ಉಪ್ಪಳ ಅಗ್ನಿಶಾಮಕ ದಳ ತಲುಪಿ ಕ್ರೆöÊನ್ ಮೂಲಕ ಮರವನ್ನು ಮೇಲೆತ್ತಿ ಕಡಿದು ತೆರವುಗೊಳಿಸಲಾಗಿದೆ. [