ಬೆಂಗಳೂರು: ತಮಿಳು ನಟ ಸಿದ್ದಾರ್ಥ್ ನಟನೆಯ ‘ಚಿಕ್ಕು’, ಸುದ್ದಿಗೋಷ್ಠಿಗೆ ಕನ್ನಡಪರ ಹೋರಾಟಗಾರರು ಮುತ್ತಿಗೆ ಹಾಕಿರೋದಕ್ಕೆ ಸ್ಯಾಂಡಲ್ ವುಡ್‌ನ ಪರವಾಗಿ ಹಿರಿಯ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಷಮೆ ಕೇಳಿದ್ದಾರೆ.
ಗುರುವಾರ(ಸೆ.30) ನಟ ಸಿದ್ದಾರ್ಥ್ ‘ಚಿಕ್ಕು’ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದಾಗ ಚಿತ್ರದ ಪ್ರಚಾರ ಮಾಡದಂತೆ ಕೆಲ ಕನ್ನಡಪರ ಹೋರಾಟಗಾರರು ತಡೆದಿದ್ದರು. ಈ ವಿಚಾರದ ಕುರಿತು ಮಾತನಾಡಿದ ಶಿವಣ್ಣ, ನಾವು ಏನೇ ಮಾಡಿದರೂ ಬೇರೆಯವರಿಗೆ ಹರ್ಟ್ ಆಗಬಾರದು. ಆಗಿರುವ ಘಟನೆ ತಪ್ಪು. ಹೀಗೆಲ್ಲ ಮಾಡಬಾರದು. ಇನ್ನುಂದೆ ಈ ರೀತಿ ಆಗುವುದಿಲ್ಲ ಎಂದಿದ್ದಾರೆ.