ಉಪ್ಪಳ: ಮುಳಿಂಜ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.18ರ ತನಕ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ.14ರಂದು ಪೂರ್ವಾಹ್ನ 7ಕ್ಕೆ ನಿತ್ಯಪೂಜೆ, 8.30ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, ಸಾಮೂಹಿಕ ಪ್ರಾರ್ಥನೆ, 11ಕ್ಕೆ ಬಲಿ ಉತ್ಸವ, ಧ್ವಜಾರೋಹಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ನಿತ್ಯಬಲಿ ಉತ್ಸವ, ಸಂಜೆ 6.30ರಿಂದ ಭಜನೆ, ರಾತ್ರಿ 7ರಿಂದ ಮಹಾಪೂಜೆ, ನಿತ್ಯಬಲಿ ಉತ್ಸವ, ರಾತ್ರಿ 8.30ರಿಂದ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ಪೌರಾಣಿಕ ತುಳು ನಾಟಕ ಪ್ರದರ್ಶಗೊಳ್ಳಲಿದೆ.