ನವದೆಹಲಿ: ಇನ್ನು ಮುಂದೆ ಔಷಧ ಪ್ಯಾಕೆಟ್’ಗಳ ಮೇಲೆ ಇರುವ ಕ್ಯೂಆರ್ ಕೋಡ್ ಸಹಾಯದಿಂದ ಔಷಧಗಳು ಅಸಲಿಯೇ ಅಥವಾ ನಕಲಿಯೇ ಎಂದು ತಿಳಿಯಬಹುದು. ಮೊದಲ ಹಂತದಲ್ಲಿ ಮಂಗಳವಾರದಿಂದ ಆರಂಭಗೊಂಡು, ಶೆಲ್ಕಾಲ್, ಕಾಲ್ಬಾಲ್, ಡೊಲೊ ಸೇರಿದಂತೆ 300 ಪ್ರಮುಖ ಬ್ಯಾಂಡ್‌ಗಳ ಔಷಧ ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ.
ಮುಂದಿನ 20 ದಿನಗಳಲ್ಲಿ ಈ ಔಷಧಗಳು ಮಾರುಕಟ್ಟೆಗೆ ಬರಲಿವೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಎಲ್ಲಾ ಔಷಧ ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅವಳಡಿಸಲಾಗುತ್ತದೆ.
ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಯಾವುದೇ ಆ್ಯಪ್ ಅನ್ನು ಮೊಬೈಲ್’ನಲ್ಲಿ ಡೌನ್ ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಕೇವಲ ಸ್ಕ್ಯಾನ್ ಮಾಡಿದರೆ ಸಾಕು. ಅಲ್ಲಿ ನೀಡಿರುವ ಲಿಂಕ್, ಔಷಧದ ಮಾಹಿತಿ ನೀಡಲು ವಿಫಲವಾದರೆ ಅಥವಾ ಪ್ಯಾಕೆಟ್ ಮೇಲೆ ಹಾಕಿರುವ ವಿವರಕ್ಕೆ ಹಾಗೂ ಅದರಲ್ಲಿರುವ ವಿವರಕ್ಕೂ ಹೊಂದಿಕೆಯಾಗದಿದ್ದರೆ, ಆ ಔಷಧವು ನಕಲಿ ಎಂದು ತಿಳಿಯಬಹುದು.