ಪೆರ್ಲ: ಅರಿಗಿಲುಂಡ್ ಆಧಾರ್ ಯೋಜನೆಯ ಮೂರನೇ ಶಿಬಿರವು ಜುಲೈ ಮೂವತ್ತರಂದು ಎಣ್ಮಕಜೆ ಪಂಚಾಯತಿನಲ್ಲಿ ನಡೆಸಲಾಯಿತು. ಪಂಚಾಯತಿನ ಪರಿಶಿಷ್ಟ ವಿಭಾಗದವರಿಗಾಗಿ ಜಿಲ್ಲೆಯ ಜಿಲ್ಲಾಡಳಿತ ಆಯೋಜಿಸಿದ್ದ ಶಿಬಿರವು ಜಿಲ್ಲಾ ಪರಿಶಿಷ್ಟ ವಿಭಾಗ ಅಭಿವೃದ್ಧಿ ಇಲಾಖೆ, ಅಕ್ಷಯ ಮತ್ತು ಎಣ್ಮಕಜೆ ಪಂಚಾಯತಿನ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.

ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ ಐ.ಎ.ಎಸ್. ಉದ್ಘಾಟಿಸಿದರು. ಪಂಚಾಯತು ಅಧ್ಯಕ್ಷರಾದ ಸೋಮಶೇಖರ ಜೆ.ಎಸ್. ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಕಾರ್ಯದರ್ಶಿ ಪ್ರೇಮಚಂದ್ ಸ್ವಾಗತಿಸಿದರು. ಟ್ರೈಬಲ್ ಎಕ್ಸ್ ಟೆನ್ಷನ್ ಓಫೀಸರ್ ಸುಧಾಕರನ್ ಮತ್ತು ಟ್ರೈಬಲ್ ಪ್ರಮೋಟರ್ ರವರ ಅಚ್ಚುಕಟ್ಟಿನ ನಿರ್ವಹಣೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಅಕ್ಷಯ ಬ್ಲೋಕ್ ಕೋ-ಆರ್ಡಿನೇಟ್ ಆಗಿರುವ ಶ್ರೀನಿವಾಸ ನಾಯ್ಕ್ ಸ್ವರ್ಗ, ಅಶೋಕ ಕೋರಿಕ್ಕಾರ್ ಆಧಾರ್ ಮಾಡಲು ನೇತೃತ್ವ ನೀಡಿದರು. ಅಕ್ಷಯ ವ್ಯವಸ್ಥಾಪಕರಾದ ವೆಂಕಪ್ಪ ಪ್ರಭು ಪೆರ್ಮುದೆ, ದಿನಕರ ರೈ ಕಾಸರಗೋಡು ಮತ್ತು ಸಿಬಂಧಿವರ್ಗ ಆಧಾರ್ ನಿರ್ವಹಿಸಿದರು.