ಇಸ್ರೇಲ್ ಮೇಲೆ ದಾಳಿ: ಭಾರತೀಯ ಪ್ರಜೆಗಳಿಗೆ ಜಾಗರೂಕರಾಗಿರಲು ರಾಯಭಾರ ಕಚೇರಿಯಿಂದ ಸೂಚನೆ

Share with

ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ.

ಇಸ್ರೇಲ್: ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿದ್ದು, ಇದೀಗ ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ನಡುವೆ ಯುದ್ಧ ನಡೆಯುತ್ತಿದ್ದು, ಭಾರತವು ಇಸ್ರೇಲ್‌ನಲ್ಲಿರುವ ತನ್ನ ಪ್ರಜೆಗಳಿಗೆ ಜಾಗರೂಕರಾಗಿರಲು ಸಲಹೆಯನ್ನು ನೀಡಿದೆ.

ರಾಯಭಾರ ಕಚೇರಿಯು ಸಲಹೆಯೊಂದನ್ನು ನೀಡಿದ್ದು, “ಇಸ್ರೇಲ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಮತ್ತು ಸ್ಥಳೀಯ ಅಧಿಕಾರಿಗಳ ಪ್ರೋಟೋಕಾಲ್‌ಗಳನ್ನು ಸಲಹೆಯಂತೆ ಸುರಕ್ಷತಾ ಅನುಸರಿಸಲು ವಿನಂತಿಸಲಾಗಿದೆ. ಅನಗತ್ಯ ಸಂಚಾರ ಬೇಡ. ಸುರಕ್ಷಿತ ಸ್ಥಳಗಳಲ್ಲಿ ಇರಿ ಎಂದು ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ ( https://www.oref.org.il/en )ಗೆ ಭೇಟಿ ನೀಡಿ. ಜತೆಗೆ ತುರ್ತು ಸಂದರ್ಭದಲ್ಲಿ ದಯವಿಟ್ಟು ರಾಯಭಾರ ಕಚೇರಿ +97235226748ಗೆ ಕರೆ ಮಾಡಿ ಅಥವಾ cons1.telaviva@ mea.gov.in ನಲ್ಲಿ ಸಂದೇಶವನ್ನು ಕಳುಹಿಸಿ ಎಂದು ಸಂದೇಶವನ್ನು ನೀಡಿದೆ.


Share with

Leave a Reply

Your email address will not be published. Required fields are marked *