ಉಡುಪಿ: ಉಡುಪಿ ಮಿತ್ರ ಆಸ್ಪತ್ರೆಯ ಸಮೀಪದ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ.

ಬ್ಯಾಂಕಿನ ಮಹಡಿಗೆ ಹೋಗುವ ಮೆಟ್ಟಿಲು ಬಳಿಯ ಗೇಟಿನ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ಬ್ಯಾಂಕಿನ ಕಿಟಕಿಯ ಒಂದು ಬದಿಯ ಸರಳುಗಳನ್ನು ತುಂಡು ಮಾಡಿ ಒಳ ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಬಳಿಕ ಬ್ಯಾಂಕಿನ ಎದುರಿನ ವರಾಂಡದಲ್ಲಿನ ಕೊಲಸ್ಟಲ್ ಗೇಟ್‌ನ ಬೀಗ ಮುರಿದು, ಬ್ಯಾಂಕಿನ ಒಳಗೆ ಇದ್ದ ಗೋಡ್ರೇಜ್ ಕಪಾಟು, ಕ್ಯಾಶ್ ಕೌಂಟರ್ ನಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಮಾಡಿ ಕಳ್ಳತನಕ್ಕೆ ಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.