ಮೈಸೂರಿನ‌ ಅವಧೂತ ಅರ್ಜುನ್ ಮಹಾರಾಜ್ ಗುರೂಜಿ ಪುತ್ತೂರಿಗೆ ಭೇಟಿ

Share with

ಪುತ್ತೂರು: ಮೈಸೂರಿನ ಅವಧೂತ ಅರ್ಜುನ್ ಮಹಾರಾಜ್ ಗುರೂಜಿಯವರು ಇತ್ತೀಚೆಗೆ ಪುತ್ತೂರಿಗೆ ಭೇಟಿ ನೀಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಕೇಪುಳುವಿನಲ್ಲಿರುವ ಪ್ರಾಧ್ಯಾಪಕ ಡಾ| ಸಂತೋಷ್ ಪ್ರಭುರವರ ಸಿಗಂದೂರು ಮನೆಗೆ ಭೇಟಿ ನೀಡಿ, ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರವಚನ‌ ನೀಡಿದರು. ಡಾ| ಸಂತೋಷ್ ಪ್ರಭು ಹಾಗೂ ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಜಂಟಿಯಾಗಿ ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಭೇಟಿಯ ಸವಿ ನೆನಪಿಗಾಗಿ‌ ಸಿಗಂದೂರು ಮನೆಯ ಪರಿಸರದಲ್ಲಿ ರುದ್ರಾಕ್ಷಿ ಗಿಡವನ್ನು ನೆಡಲಾಯಿತು.‌


Share with

Leave a Reply

Your email address will not be published. Required fields are marked *