ಉಪ್ಪಳ: ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಅಟ್ಟೆಗೋಳಿ ವಿಷ್ಣುನಗರ ಇದರ ಆಶ್ರಯದಲ್ಲಿ 49ನೇ ವರ್ಷದ ಬೈಲುಕೋಲ ಮಾ.16ರಂದು ನಡೆಯಲಿದೆ.
ಇದರ ಅಂಗವಾಗಿ 15ರಂದು ರಾತ್ರಿ 8ಕ್ಕೆ ಗುಳಿಗನ ಕೋಲ, 16ರಂದು ಬೆಳಿಗ್ಗೆ 8ಕ್ಕೆ ಗಣಹೋಮ, 9ರಿಂದ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ 7ಕ್ಕೆ ಅಟ್ಟೆಗೋಳಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಉತ್ಸವಾಂಗಣಕ್ಕೆ ವಾದ್ಯ ಘೋಷದೊಂದಿಗೆ ಭಂಡಾರ ಹೊರಡುವುದು, ರಾತ್ರಿ 8ರಿಂದ ವಿವಿಧ ವಿನೋದಾವಳಿಗಳು, 9ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ, 12ಕ್ಕೆ ಶ್ರೀ ದೈವದ ಕುಳೀಚ್ಚೋಟಂ, ರಾತ್ರಿ 1ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಅಭಿನಯಿಸುವ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ತುಳು ಪೌರಣಿಕ ನಾಟಕ ಪ್ರದರ್ಶನ, ಬೆಳಿಗ್ಗೆ 4.30ಕ್ಕೆ ಶ್ರೀ ದೈವ ಅಗ್ನಿ ಸೇವೆ, 5ಕ್ಕೆ ಶ್ರೀ ದೈವದ ಪ್ರಸಾದ ವಿತರಣೆ, 7ಕ್ಕೆ ಭಂಡಾರ ಇಳಿಯುವುದು.