ಬೆಳ್ತಂಗಡಿ ಪ.ಪಂ. ಸಾಮಾನ್ಯ ಸಭೆ

Share with

ಬೆಳ್ತಂಗಡಿ, ಸೆ.13: ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಬೆಳ್ತಂಗಡಿ ಪಟ್ಟಣಕ್ಕೆ ಮೂಡ ನಿಯಮ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ, ಈ ಹಿಂದೆ ವಿಭಜಿತ ಭೂಮಿಗಳಿಗೆ ತಾರ್ಕಿಕ ಅಂತ್ಯ ಒದಗಿಸದೆ ಅಂಗೀಕಾರಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸದೆ ಸರಕಾರಕ್ಕೆ ಬರೆಯುವಂತೆ ಒತ್ತಾಯಿಸಿದ ಘಟನೆ ನಡೆಯಿತು.

ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಸೆ.13 ರಂದು ಆಡಳಿತಾಧಿಕಾರಿ ತಹಶೀಲ್ದಾರ್ ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸುಧೀರ್ಘ ಚರ್ಚೆಗೆ ಕಾರಣವಾಯಿತು.

ಮಹಾಯೋಜನೆ ಬೆಳ್ತಂಗಡಿ ಅನುಮೋದನೆ ಆಗುವ ಮೊದಲು ನಮಗೆ ಅನೇಕ ಜಿಜ್ಞಾಸೆಗಳಿಗೆ ಸ್ಪಷ್ಟತೆ ಬೇಕಿದೆ. ಪ್ರಸಕ್ತ 8000 ದಷ್ಟು ಜನಸಂಖ್ಯೆ ಹೊಂದಿರುವ ಬೆಳ್ತಂಗಡಿ ಪ.ಪಂ. ರಾಜ್ಯದ ಅತೀ ಕಿರಿಯ ಎರಡನೇ ಪ.ಪಂ. ಆಗಿದೆ. 2017 ಕ್ಕಿಂತ ಹಿಂದೆ ವಿಭಜನೆಗೊಂಡ ಭೂಮಿಗಳಿಗೆ ಭೂ ಪರಿವರ್ತನೆಗೆ ನೀಡುತ್ತಿಲ್ಲ. ಪರಿಣಾಮ ಮನೆ ನಿರ್ಮಾಣಕ್ಕೆ, ಇರುವ ಕಟ್ಟಡ ವಿಸ್ತರಣೆಗೆ ಅವಕಾಶವಿಲ್ಲ. ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಲಭಿಸದೆ ನಿವೃತ್ತಿ ಅಂಚಿನಲ್ಲಿರುವ ಮಂದಿ, ಸ್ಥಳ ಖರೀದಿಸಿ ಮನೆ ನಿರ್ಮಿಸಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಈವಿಚಾರವಾಗಿ ಅಂತವರಿಗೆ ಶರತ್ತಿನಡಿ ಫಾರಂ-3 ನೀಡಿ ಕಟ್ಟಡ ಪರವಾನಿಗೆಗೆ ಅವಕಾಶ ಕಲ್ಪಿಸಬೇಕು ಎಂದು ಹಿರಿಯ ಸದಸ್ಯ ಜಗದೀಶ್ ಡಿ. ಆಗ್ರಹಿಸಿದರು.

ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಿ ಸಹಾಯಕ ನಿರ್ದೇಶಕ ಪಾರಿತೋಷಕ ನಾಯಕ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಷ್ಟು ವರ್ಷಗಳ ಅಧ್ಯಯನದ ಬಳಿಕ ಮೂಡ ಜಾರಿ ಕಡೆ ಹಂತಕ್ಕೆ ತಲುಪಿದೆ. ಈ ಸಮಯದಲ್ಲಿ ತಿರಸ್ಕರಿಸಿದಲ್ಲಿ ಮುಂದೆ ಪಟ್ಟಣ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಹೇಳಿದರು.

ಈ ವಿಚಾರವಾಗಿ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಪ್ರತಿಕ್ರಿಯಿಸಿ, ಮೂಡುಬಿದ್ರೆ, ಬಂಟ್ವಾಳ ಸೇರಿದಂತೆ ಇತರೆಡೆ ಭೂ ಪರಿವರ್ತನೆಯಾದ ನಿವೇಶನಕ್ಕೆ ಫಾರಂ-3 ನೀಡುತ್ತಿದ್ದಾರೆ. ಆದರೆ ಬೆಳ್ತಂಗಡಿಗೆ ಯಾಕೆ ಆಗುತ್ತಿಲ್ಲ. ಈ ಹಿಂದೆ ವಿಭಜನೆ ಮಾಡಿದ ಭೂ ಮಾಲೀಕರಿಗೆ ದಂಡ ಕಟ್ಟಿಸಿಯಾದರೂ ಬಳಿಕ ಅವಕಾಶ ನೀಡಬೇಕು. ಬಳಿಕ ಮಹಾಯೋಜನೆ ಅನುಮೋದನೆಗೆ ನಮ್ಮ ಅಭ್ಯಂತರವಿಲ್ಲ ಎಂದು ಆಗ್ರಹಿಸಿದರು.

ತಹಶೀಲ್ದಾರ್ ಸುರೇಶ್ ಕುಮಾರ್ ಮಧ್ಯ ಪ್ರವೇಶಿಸಿ, ಸದಸ್ಯರು ಅವರವರ ವಾರ್ಡ್ ವ್ಯಾಪ್ತಿಗೆ ಒಳಪಟ್ಟಂತೆ ಸಮಸ್ಯೆಗಳ ಪಟ್ಟಿ ನೀಡಿ. ಮತ್ತೊಮ್ಮೆ ಸಭೆ ಮಾಡಿ ಸರಕಾರಕ್ಕೆ ಬರೆದು ಕಳೆಸೋಣ. ವಿನಾಯಿತಿ ನೀಡಿದಲ್ಲಿ ಅನಮೋದನೆ ಪಡೆಯೋಣ ಎಂದರು.

ಎಲ್ಲ ಸಮಸ್ಯೆಗಳನ್ನು ವಿಧಾನ ಸೌಧದಲ್ಲಿ ಪ್ರಸ್ತಾಪಿಸಿ ನಮಗೆ ನ್ಯಾಯಕೊಡಿಸಬೇಕು. ಇದಕ್ಕೆ ಮೂರು ತಿಂಗಳು ಕಾಲಾವಕಾಶ ಕೊಡಬೇಕು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಬೇಕಿದೆ. ಕೇವಲ‌ ಕಾನೂನು ಮುಂದಿಟ್ಟು ಜನರಿಗೆ ಸಂಕಷ್ಟ ನೀಡಲು ನಾವು ಸಿದ್ಧರಿಲ್ಲ ಎಂದು ಸದಸ್ಯರು ಪಟ್ಟು ಹಿಡಿದರಲ್ಲದೆ 2017- 18 ರಿಂದ ಹಿಂದಿನ ವಿಭಾಜನೆ ಮಾಡಿಕೊಂಡ ನಿವೇಶನಕ್ಕೆ ಸ್ಥಳೀಯ ಪ್ರಾಧಿಕಾರದಿಂದ ಫಾರಂ- 3 ನೀಡಬೇಕು. ನೀಡಿದವರಿಗೆ ಕಟ್ಟಡ ಕಟ್ಟಲು ಅನುಮತಿ ನೀಡಬೇಕು ಎಂದು ಸದಸ್ಯರ ಒಮ್ಮತದ ನಿರ್ಣಯದಿಂತೆ ಇದಕ್ಕೆ ಸೂಕ್ತ ಉತ್ತರ ದೊರೆಕಿದ ಬಳಿಕ ಮಹಾ ಯೋಜನೆ ಅನುಮೋದನೆ ಮಾಡುವಂತೆ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

  • ರೆಂಕೆದಗುತ್ತು ದ್ರವತ್ಯಾಜ್ಯ ಘಟಕ ನಿರ್ವಹಣೆ ಬೇಕು

ರೆಂಕೆದಗುತ್ತುವಿನಲ್ಲಿರುವ ಶೌಚಾಲಯದ ದ್ರವತ್ಯಾಜ್ಯವು 10 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿದ್ದು, 5.30 ಕೋ.ರೂ. ನಿರ್ವಹಣೆಗೆ ಅನುದಾನ ಇರಿಸಲಾಗಿದೆ. ಪ್ರತಿಮನೆಯ ಮಲೀನ ತುಂಬಿದಾಗ ಅದನ್ನು ತೆರವುಗೊಳಿಸಲು ಮನೆಯವರೇ ವೆಚ್ಚ ಭರಿಸಬೇಕು. ಅದರ ಬದಲಾಗಿ, ಈಗಿರುವ ಸೆಪ್ಟಿಕ್ ಟ್ಯಾಂಕ್ ಗೆ ನೇರ ಸಂಪರ್ಕ ಕಲ್ಪಿಸಿ ಅಲ್ಲಿಂದ ನೇರವಾಗಿ ಘನತ್ಯಾಜ್ಯ ಘಟಕಕ್ಕೆ ಕೊಂಡೊಯ್ಯುವ ಕಾರ್ಯವಾಗಬೇಕು. ಜನರಿಂದ ಹಣ ಪಡೆಯದೆ ಪ.ಪಂ. ಅದರ ನಿರ್ವಹಣೆ ಮಾಡಬೇಕು ಎಂದು ಸದಸ್ಯ ಜಗದೀಶ್ ಆಗ್ರಹಿಸಿದರು.

ಸದಸ್ಯ ಜಯಾನಂದ ಧ್ವನಿಗೂಡಿಸಿ, ಈಗಾಗಲೆ ನಿರ್ಮಾಣ ಆದ ಘಟಕವನ್ನು ಪ.ಪಂ. ಗೆ ಹಸ್ತಾಂತರಿಸಲಾಗಿದೆಯೇ? ಅಗಿದ್ದಲ್ಲಿ ಉದ್ಘಾಟನೆ ಯಾಕಾಗಿಲ್ಲ? ಈ ಬಗ್ಗೆ ಯಾವುದೇ ಸದಸ್ಯರ ಗಮನಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದರು. ಪ.ಪಂ. ಮುಖ್ಯಾಧಿಕಾರಿ ಮತ್ತು ಎಂಜಿನಿಯರ್ ಉತ್ತರಿಸಿ ಕಾಮಗಾರಿ ಪೂರ್ಣಗೊಂಡಿಲ್ಲ, ಐದು ವರ್ಷ ನಿರ್ವಹಣೆ ಬಳಿಕ ಹಸ್ತಾಂತರವಾಗಲಿದೆ. ಅಲ್ಲಿವರೆಗೆ ನಿರ್ವಹಣೆಗೆ 5 ಲಕ್ಷ ರೂ. ಇರಿಸಲಾಗಿದೆ ಎಂದರು. ಆದರೆ ಸದಸ್ಯರು ಪಟ್ಟು ಹಿಡಿದು ಉಳಿಕೆ ಹಣದಿಂದಲೇ ನಿರ್ವಹಣೆಯಾಗಬೇಕು ಎಂದು ಒತ್ತಾಯಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿರುವ ನಾಲ್ಕು ಕೆರೆಗಳ ಅತಿಕ್ರಮಣವಾಗಿದ್ದು ಕೂಡಲೆ ತೆರವಾಗಬೇಕಿದೆ. ಪ.ಪಂ.‌ ಖಾಲಿ ಇರುವ ಡಿ ದರ್ಜೆ ಹುದ್ದೆ ಭರ್ತಿಯಾಗಬೇಕು. ಪ.ಪಂ. ವ್ಯಾಪ್ತಿಯ ಹಸಿಮೀನು ಮಾರುಕಟ್ಟೆ ಅಂಕಣ ತೆರವುಗೊಳಿಸುವ ಕಾರ್ಯವಾಗಬೇಕು. ಜತೆಗೆ ಜನರೋತ್ತಾನದಡಿ ಮಾಡಿರುವ ಒಂದೇ ಒಂದು ಕಾಮಗಾರಿಗಳು ಸಂಪೂರ್ಣಗೊಂಡಿಲ್ಲ, ಮಾಡಿರುವ ಕಾಮಗಾರಿಗಳೆಲ್ಲ ಕಳಪೆಯಾಗಿದೆ ತಕ್ಷಣ ಅವರ ಮೇಲೆ ಕ್ರಮವಹಿಸಬೇಕು. ಬೆಳ್ತಂಗಡಿ ಪ.ಪಂ. ಕಟ್ಟದ ಭೂಮಿ ಇನ್ನೂ ಕಂದಾಯ ಇಲಾಖೆಯ ಸುಪರ್ದಿಯಲ್ಲಿದ್ದು ತಕ್ಷಣ ಪ.ಪಂ.ಗೆ ಮಂಜೂರುಗೊಳಿಸಬೇಕೆಂದು ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ ಆಡಳಿತಾಧಿಕಾರಿ ಮುಂದಿಟ್ಟರು.

ಅರಿಕ್ರಮಣವಾದ ಕೆರೆಗಳಲ್ಲಿ ಮರ ಗಿಡಗಳಿವೆ. ಪರಿಶೀಲಿಸಿ ನಮಗೆ ಹಸ್ತಾಂತರವಾದ ಬಳಿಕ ಅಭಿವೃದ್ಧಿಗೆ ಅನುದಾನ ಕೋರಿ ಪ್ರಸ್ತಾವನೆ ಕಳುಹಿಸಲಾಗುವುದು. ಸಿಬಂದಿ ಕೊರತೆ ವಿಚಾರ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಸದ್ಯ ಪುತ್ತೂರಿಂದ ಓರ್ವ ಸಿಬಂದಿ ವಾರಕ್ಕೆ ಎರಡು ಬಾರಿ ಪ್ರಭಾರವಾಗಿ ಬರಲಿದ್ದಾರೆ.
ಹಸಿಮೀನು ಅಂಕಣ ತೆರವಿಗೆ ಹಾಗೂ ನಗರೋತ್ತಾನದಡಿ ಆದ ಕಾಮಗಾರಿ ವೀಕ್ಷಿಸಿ ಕ್ರಮ ವಹಿಸಲಾಗುವುದು. ಪ.ಪಂ. ನಿವೇಶನ ವಿಚಾರವಾಗಿ ಎಸಿಯವರಲ್ಲಿ ಪತ್ರ ಬರೆದು ಮಂಜೂರು ಮಾಡಿಸುವ ಜವಾಬ್ದಾರಿ ನನ್ನದು ಎಂದು ಸುರೇಶ್ ಕುಮಾರ್ ಭರವಸೆ ನೀಡಿದರು.

ಕೆಆರ್ ಡಿಎಲ್ ನವರ ಕಾಮಗಾರಿಗಳು ಕಾಮಗಾರಿಗಳು ಕಳಪೆಯಾಗಿದೆ. ಅವರಿಗೆ ನೋಟಿಸ್ ನೀಡಬೇಕು ಎಂದು ತಹಶೀಲ್ದಾರ್ ಬಳಿ ಸದಸ್ಯರು ಮನವಿ ಮಾಡಿದರು. ಎಂಜಿನಿಯರ್ ಪ್ರತಿಕ್ರಿಯಿಸಿ ಕೆಐಆರ್ ಡಿಎಲ್ ನಿಂದ 780 ಲಕ್ಷ ರೂ. ನಡಿ 28 ಕಾಮಗಾರಿ ಪೂರ್ಣಗೊಂಡಿದೆ. 5 ಕಾಮಗಾರಿ ಬಾಕಿ ಉಳಿದಿದೆ ಎಂದು ಎಂಜಿನಿಯರ್ ತಿಳಿಸಿದರು. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ನೋಡಿಸ್ ನೀಡಿ ಎಂದು ಅಧ್ಯಕ್ಷರು ಸೂಚಿಸಿದರು.

  • ಇಂದಿರಾ ಕ್ಯಾಂಟೀನ್ ಗಿಲ್ಲ ಸ್ಥಳ
    ಇಂದಿರಾ ಕ್ಯಾಂಟೀನ್ ತೆರೆಯುವಂತೆ ಜಿಲ್ಲಾಧಿಕಾರಿಗಳು ಒತ್ತಾಯಿಸುತ್ತಿದ್ದಾರೆ‌. ನಗರದಲ್ಲಿ ಜಾಗದ ಕೊರತೆಯಿದೆ. ಪ.ಪಂ.ವ್ಯಾಪ್ತಿಯಲ್ಲಿದ್ದರೆ ಸೂಚಿಸಿ ಎಂದು ಅಧ್ಯಕ್ಷರು ಕೇಳಿಕೊಂಡಾಗ ಮಿನಿ ವಿಧಾನ ಸೌಧ ಹಿಂದೆ ಸ್ಥಳದಲ್ಲಿ ಮಾಡುವಂತೆ ಸದಸ್ಯರು ಸಲಹೆ ನೀಡಿದರಿ. ಅದು ಟ್ರೆಷರಿ ಅವರ ಕಚೇರಿಗೆ ಸ್ಥಳ ಮಂಜೂರು ಮಾಡಲಾಗಿದೆ ಎಂದರು.

ಮುಖ್ಯಾಧಿಕಾರಿ ರಾಜೇಶ್, ಆಡಳಿತಾಧಿಕಾರಿ ಸುರೇಶ್ ಕುಮಾರ್ ಸಹಿತ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

  • ಪ.ಪಂ. ಸಂಬಂಧಿಸಿದಂತೆ 50 ಮಂದಿ ವಿಕಲಾಂಗರಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಅನುದಾನ ಒದಗಿಸಲು ಸಲಹೆ
  • ಪೌರಾಳಡಿತ‌, ಸಚಿವರನ್ನು ತಕ್ಷಣ ಸಂಪರ್ಕಿಸಿ ಮೂಡ ನಿಯಮದ ಗೊಂದಲ ಸರಿಪಡಿಸಲು ಆಗ್ರಹ
  • ಜೈನ್ ಪೇಟೆ, ಕುತ್ಯಾರು ರಸ್ತೆ, ಅಲ್ಲಾಟಬೈಲು ಸುತ್ತ ತೋಡುಗಳ ಸ್ವಚ್ಛತೆಗೆ ಕಾರ್ಯಯೋಜನೆ
  • ನಗರದ ಮುಖ್ಯ ರಸ್ತೆಯಲ್ಲಿರುವ ಹೊಂಡ ಸರಿಪಡಿಸಲು ಸೂಚನೆ
  • ಕುಡಿಯುವ ನೀರು, ಬೀದಿ ದೀಪ, ಒಳಚರಂಡಿ ಪ್ರಮುಖ ಆಧ್ಯತೆ ಬೀಡಿ.

Share with

Leave a Reply

Your email address will not be published. Required fields are marked *