ಬಿಜೆಪಿ ಮಂಡಲದ ವತಿಯಿಂದ ‘ನನ್ನ ದೇಶ ನನ್ನ ಮಣ್ಣು’ ಕಾರ್ಯಕ್ರಮ

Share with

'ನನ್ನ ದೇಶ ನನ್ನ ಮಣ್ಣು' ಕಾರ್ಯಕ್ರಮ ಶ್ರೀ ದೇವಪ್ಪ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಭಾರತ ನಮ್ಮ ಜನ್ಮ ಭೂಮಿ, ಪುಣ್ಯಭೂಮಿ. ನಾವೆಲ್ಲಾ ಪ್ರಕೃತಿಯ ಆರಾಧಕರು. ಈ ಪುಣ್ಯ ಭೂಮಿಯ ನೆಲ, ಜಲ ಕಲ್ಲು, ಮರ ಎಲ್ಲವೂ ನಮಗೆ ದೇವ ಸ್ವರೂಪಿ ಮಾತ್ರವಲ್ಲ ಅತೀ ಪವಿತ್ರ. ಹಾಗಾಗಿ ನನ್ನ ದೇಶ ನನ್ನ ಮಣ್ಣು ಎಂಬ ಭಾವನಾತ್ಮಕ ಕಾರ್ಯಕ್ರಮವನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆ ಪ್ರಯುಕ್ತ ಈ ದಿನ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿ ಮಂಡಲದ ವತಿಯಿಂದ ‘ನನ್ನ ದೇಶ ನನ್ನ ಮಣ್ಣು’ ಕಾರ್ಯಕ್ರಮ ಶ್ರೀ ದೇವಪ್ಪ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿ ಮಂಡಲದ ವತಿಯಿಂದ 'ನನ್ನ ದೇಶ ನನ್ನ ಮಣ್ಣು' ಕಾರ್ಯಕ್ರಮ.
ನನ್ನ ದೇಶ ನನ್ನ ಮಣ್ಣು ಎಂಬ ಭಾವನಾತ್ಮಕ ಕಾರ್ಯಕ್ರಮದ ಸಭೆ.

ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಮತ್ತು ‘ನನ್ನ ದೇಶ ನನ್ನ ಮಣ್ಣು’ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಶ್ರೀ ಸಂದೇಶ್ ಶೆಟ್ಟಿ ಈ ಭಾವನಾತ್ಮಕ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇನ್ನೋರ್ವ ಜಿಲ್ಲಾ ಸಂಚಾಲಕರಾದ ಶ್ರೀ ಸಂತೋಷ್ ಕುಮಾರ್ ಬೋಳಿಯಾರ್ ನರೇಂದ್ರ ಮೋದಿಯವರ ಕಲ್ಪನೆಯ ಈ ಕಾರ್ಯಕ್ರಮದ ಉದ್ದೇಶ ಮತ್ತು ಮಹತ್ವವನ್ನು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಕೊರಗಪ್ಪ ನಾಯ್ಕ ಶ್ರೀ ಹರಿಕೃಷ್ಣ ಬಂಟ್ವಾಳ, ಪ್ರಮುಖರಾದ ದೇವದಾಸ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮ ಯೋಧರ ಗೌರವಾರ್ಥ ನಿರ್ಮಾಣವಾಗಲಿರುವ ಪವಿತ್ರ ಅಮೃತವನಕ್ಕಾಗಿ ಈ ಸಂದರ್ಭದಲ್ಲಿ ಬಂಟ್ವಾಳದ ಗ್ರಾಮ ಗ್ರಾಮಗಳ ಧಾರ್ಮಿಕ ಕ್ಷೇತ್ರಗಳಿಂದ ಪವಿತ್ರ ಮೃತಿಕೆಯನ್ನು ಸಮರ್ಪಿಸಲಾಯಿತು. ಈ ಪವಿತ್ರ ಮಣ್ಣನ್ನು ಕಳಶದೊಂದಿಗೆ ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಾಣವಾಗಲಿರುವ ಅಮೃತವನದ ಸ್ಥಳಕ್ಕೆ ಕಳುಹಿಸಲಾಗುವುದು. ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಸ್ವಾಗತಿಸಿ, ಶ್ರೀ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.


Share with

Leave a Reply

Your email address will not be published. Required fields are marked *