ಕಾಂಗ್ರೆಸ್‌ನ ಗ್ಯಾರೆಂಟಿಗಳ ಅಧ್ಯಯನಕ್ಕೆ ಬಿಜೆಪಿ ಟೀಮ್ ರೆಡಿ!

Share with

ಕಾಂಗ್ರೆಸ್‌ನ 5 ಗ್ಯಾರೆಂಟಿಗಳು ಜನರ ಮೇಲೆ ಹೇಗೆ ಪರಿಣಾಮ ಬೀರಲಿದೆ ಅನ್ನುವುದನ್ನು ಲೋಕಸಭೆ ಚುನಾವಣೆಗೆ ಮುನ್ನ ಅರಿಯಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.

ಈ ಗ್ಯಾರೆಂಟಿ ಯೋಜನೆಗಳಿಗೆ ಜನರ ಪ್ರತಿಕ್ರಿಯೆ ಏನು? ಅದು ನಿಜವಾಗಿಯೂ ಜನರಿಗೆ ಸಹಾಯ ಮಾಡುತ್ತಿದೆಯೇ ಅನ್ನುವುದನ್ನು ಅರಿತು ವರದಿ ತಯಾರಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಇದೇ ವೇಳೆ ಸರ್ಕಾರದ ಈ ಯೋಜನೆಗಳಿಂದ ಆಗುವ ಹಾನಿ ಹಾಗೂ ರಾಜ್ಯದ ಆರ್ಥಿಕ ಭವಿಷ್ಯದ ಬಗ್ಗೆಯೂ ಬಿಜೆಪಿ ಈ ಕುರಿತು ಅಧ್ಯಯನ ಮಾಡಲಿದೆ ಎಂದು ಹೇಳಲಾಗಿದೆ.


Share with

Leave a Reply

Your email address will not be published. Required fields are marked *