ಉಪ್ಪಳ: ಬಿ.ಎಂ.ಎಸ್ ಕುಂಬಳೆ ವಲಯ ಸಮಿತಿಯ ಪ್ರವರ್ತಕ ಸಮಾವೇಶ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ನಡೆಯಿತು. ವಲಯ ಸಮಿತಿ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಅಡ್ವಿಕೆಟ್ ಪಿ. ಮುರಳೀಧರನ್ ಉದ್ಘಾಟಿಸಿ ಸಂಘಟನೆಯನ್ನು ಉದ್ದೇಷಿಸಿ ಮಾತನಾಡಿದರು. ಮುಂದಿನ ಒಂದು ವರ್ಷದ ಕಾರ್ಯಕ್ರಮ ವನ್ನು ವಿವರಿಸಿದರು. ಜಿಲ್ಲಾ ಜತೆ i ಕಾರ್ಯದರ್ಶಿ ಗಳಾದ ಲೀಲಾಕೃಷ್ಣ ಮುಳ್ಳೇರಿಯ, ಹರೀಶ್ ಕುದ್ರೆ ಪಾಡಿ, ಅಂಗನವಾಡಿ ವರ್ಕರ್ಸ್ ಸಂಘದ ಜಿಲ್ಲಾ ಕಾರ್ಯದರ್ಶಿ ಶೋಭಾ ಬಾಲರಾಜ್ ,ಶುಭ ಕೋರಿದರು. ವಲಯ ಕಾರ್ಯದರ್ಶಿ ಸಂಜೀವ ಸ್ವಾಗತಿಸಿ, ಕೊಶಾ ಧಿಕಾರಿ ಐತ್ತಪ್ಪ ನಾರಾಯಣ ಮಂಗಲ ವಂದಿಸಿದರು.