ಉಪ್ಪಳ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಾ.5ರಂದು ಬ್ರಹ್ಮಕಲಶ ದಿನಾಚರಣೆ ಹಾಗೂ ಮಾ.8ರಂದು ಮಹಾ ಶಿವರಾತ್ರಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
5ರಂದು ಬೆಳಿಗ್ಗೆ 7.30ಕ್ಕೆ ನಿತ್ಯ ಪೂಜೆ, 8ರಿಂದ ಗಣಹೋಮ, 9ರಿಂದ ಶತರುದ್ರಾಭಿಷೇಕ ಮತ್ತು ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30ಕ್ಕೆ ಭಜನೆ, ರಾತ್ರಿ 8.30ಕ್ಕೆ ರಂಗಪೂಜೆ, 8ರಂದು ಪೂರ್ವಾಹ್ನ 7.30ಕ್ಕೆ ಗಣಹೋಮ, 8ರಿಂದ ಸೀಯಾಳಾಭಿಷೇಕ, 9ರಿಂದ ಶತರುದ್ರಾಭಿಷೇಕ, ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7ರಿಂದ ಭಜನೆ, 9ರಿಂದ ದೊಡ್ಡ ರಂಗಪೂಜೆ, 9.30ರಿಂದ ಶ್ರೀದೇವರ ಬಲಿ ಉತ್ಸವ, 10.30ರಿಂದ ವಿಷು ಕುಮಾರ್ ವಿರಚಿತ ಕೋಟಿ ಚೆನ್ನಯ ತುಳು ಚಾರಿತ್ರಿಕ ನಾಟಕ ಪ್ರದರ್ಶನಗೊಳ್ಳಲಿದೆ.