ಉಪ್ಪಳ: ಕುಬಣೂರು ಸಹಿತ ದೇರ್ಜಾಲ್ ಹೊಳೆಯಲ್ಲಿ ತ್ಯಾಜ್ಯ; ಸಿಸಿ ಕ್ಯಾಮರ ಅಳವಡಿಸಿ ಕ್ರಮಕ್ಕೆ ಒತ್ತಾಯ

Share with

ಉಪ್ಪಳ: ಹೆದ್ದಾರಿಯಲ್ಲಿ ಸಿಸಿ ಕ್ಯಾಮರ ಅಳವಡಿಸಿದ ಬಳಿಕ ತ್ಯಾಜ್ಯ ಉಪೇಕ್ಷಿಸುವುದನ್ನು ನಿಲ್ಲಿಸಿದರೂ ಇದೀಗ ಒಳರಸ್ತೆ ಸಹಿತ ಹೊಳೆಗಳಲ್ಲಿ ತ್ಯಾಜ್ಯ ಸುರಿಯುತ್ತಿರುವುದು ವ್ಯಾಪಕಗೊಂಡಿರುವುದಾಗಿ ಊರವರ ಆರೋಪಿಸಿದ್ದಾರೆ.

ಕುಬಣೂರು ಸಹಿತ ದೇರ್ಜಾಲ್ ಹೊಳೆಯಲ್ಲಿ ತ್ಯಾಜ್ಯ

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬಣೂರು –ಕನ್ನಟಿಪಾರೆ ರಸ್ತೆಯಲ್ಲಿ ಸಿಗುವ ದೇರ್ಜಾಲ್ ಹೊಳೆ ಹಾಗೂ ಇದೇ ಪರಿಸರದ ಕುಬಣೂರು ಸುವರ್ಣಗಿರಿ ಹೊಳೆಯಲ್ಲಿ ಹಾಗೂ ಪರಿಸರದ ರಸ್ತೆಗಳಲ್ಲಿ ತ್ಯಾಜ್ಯಗಳನ್ನು ಉಪೇಕ್ಷಿಸಲಾಗುತ್ತಿದೆ. ವಿವಿಧ ಸಮಾರಂಭಗಳಲ್ಲಿ ಉಪಯೋಗಿಸಿದ ಪ್ಲೇಟ್ ಸಹಿತ ಇತರ ತ್ಯಾಜ್ಯಗಳು ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ರಾತ್ರಿ ಹೊತ್ತಲ್ಲಿ ತಂದು ಎಸೆಯಲಾಗುತ್ತಿದ್ದು, ದುರ್ವಾಸನೆಯಿಂದ ಸಂಚಾರ ಸಮಸ್ಯೆಯಗುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ. ಇದೀಗ ನೀರುಯಿಲ್ಲದಿರುವುದರಿಂದ ತ್ಯಾಜ್ಯ ಹೊಳೆಯಲ್ಲಿ ಸಂಗ್ರಹಗೊಂಡಿದೆ. ಅಲ್ಲದೆ ಹೊಳೆಯ ಸಂಕದ ಪರಿಸರದಲ್ಲಿ ಭಾರೀ ಪ್ರಮಾಣದ ಕಸಕಡ್ಡಿಗಳು ತುಂಬಿಕೊಂಡಿದೆ. ಸಂಬಂಧಪಟ್ಟ ಪಂಚಾಯತ್ ಅಧಿಕೃತರು ಹೊಳೆ ಪರಿಸರದಲ್ಲಿಲ್ಲಿ ಸಿಸಿ ಕ್ಯಾಮರ ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *