ಅಲಹಾಬಾದ್ :ಉತ್ತರಪ್ರದೇಶ ಬಾರಾಬಂಕಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಅಣ್ಣನೇ ತಂಗಿಯ ಶಿರಚ್ಛೇದನ ಮಾಡಿದ ಕೃತ್ಯ ನಡೆದಿದೆ. ಮಿತ್ವಾರ ಗ್ರಾಮದಲ್ಲಿ 24 ವರ್ಷದ ರಿಯಾಜ್ ಎಂಬಾತ ತಂಗಿಯ ಪ್ರೇಮ ಸಂಬಂಧವನ್ನು ವಿರೋಧಿಸಿ ಅವಳ ಶಿರಚ್ಛೇದನ ಮಾಡಿದ್ದಾನೆ. ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆಕೆ ತನ್ನ ಗ್ರಾಮದ ಅದೇ ಸಮುದಾಯದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಳು. ಈ ಸಂಬಂಧ ಯುವತಿಯ ತಂದೆ ದೂರು ದಾಖಲಿಸಿದ್ದರು. ತಂಗಿಯ ಪ್ರೇಮದ ಬಗ್ಗೆ ಕೋಪಗೊಂಡ ರಿಯಾಜ್ ಆಕೆಯ ಶಿರಚ್ಛೇದ ಮಾಡಿದ್ದಾನೆ. ಪೊಲೀಸರು ಗ್ರಾಮವನ್ನು ತಲುಪಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ-ಉತ್ತರ) ಅಶುತೋಷ್ ಮಿಶ್ರಾ ತಿಳಿಸಿದ್ದಾರೆ.
ಶಿರಚ್ಛೇದ ಮಾಡಿದ ನಂತರ ಆಕೆಯ ತಲೆಯನ್ನು ಕೈಯಲ್ಲಿ ಹಿಡಿದು ಈತ ಬೀದಿಗಳಲ್ಲಿ ಸುತ್ತಾಡಿದ್ದಾನೆ ಎಂದು ಹೇಳಲಾಗಿದೆ.