ಕಾಸರಗೋಡು: ಸ್ನಾನಕ್ಕೆಂದು ಕೆರೆಗೆ ಹೋದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಕೊಪ್ಪಳ ಎಂಬಲ್ಲಿ ಜು.1 ರಂದು ಮಧ್ಯಾಹ್ನ ವರದಿಯಾಗಿದೆ. ಮಂಜೇಶ್ವರ ಮಜಿ ಬೈಲ್ ನಿವಾಸಿ ಖಾದರ್ ಮತ್ತು ಮೊಗ್ರಾಲ್ ಕೊಪ್ಪಳ ಮೂಲದ ನಸೀಮಾ ದಂಪತಿ ಪುತ್ರರಾದ ನವಾಝ್ ರಹ್ಮಾನ್(22 ವ) ಮತ್ತು ನಾದಿಲ್ (17 ವ) ಮೃತಪಟ್ಟ ಸಹೋದರರು.
ಸ್ಥಳೀಯರು ಇಬ್ಬರನ್ನು ಮೇಲಕ್ಕೆತ್ತಿ ಅಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಈರ್ವರೂ ಮೃತಪಟ್ಟಿದ್ದಾರೆ. ಈದ್ ಆಚರಣೆಗೆಂದು ಅಜ್ಜಿ ಮನೆಗೆ ಬಂದಿದ್ದ ಇವರು ಸ್ನಾನ ಮಾಡಲು ಕೆರೆಗೆ ಹೋಗಿದ್ದ ವೇಳೆ ದುರಂತ ಸಂಭವಿಸಿದೆ.
ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿದ್ದಾರೆ. ಮೃತ ದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.