ಮಂಗಳೂರು: ಕಾರೊಂದು ಟಿಪ್ಪರ್ ಮತ್ತು ಮರಕ್ಕೆ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸುರತ್ಕಲ್ ಹೊಸಬೆಟ್ಟುವಿನ ಜ್ಯೋತಿ ಸರ್ವಿಸ್ ಸ್ಟೇಷನ್ ಬಳಿ ನಡೆದಿದೆ.
ಇದು ತಮಿಳುನಾಡು ನೊಂದಣಿಯ ಕಾರಾಗಿದ್ದು ಪೊಲೀಸರ ಮತ್ತು ಸಾರ್ವಜನಿಕರ ಸಹಕಾರದಿಂದ ಎರಡು ಗಂಟೆಯ ಪರಿಶ್ರಮದಿಂದ ಶವವನ್ನು ಹೊರತೆಗೆಯಲಾಯಿತು ಎನ್ನಲಾಗಿದೆ.
ಕಾರಿನಲಿದ್ದ ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.