ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ, ಪ್ರಾಕೃತಿಕ ವಿಕೋಪ ವಿಚಾರವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ ಉಂಟಾಗಬಹುದಾದ 34 ಜಾಗಗಳನ್ನು ಗುರುತಿಸಲಾಗಿದ್ದು. ಪ್ರವಾಹ ಸಾಧ್ಯತೆಯ 63 ಜಾಗಗಳು ಮತ್ತು ರಸ್ತೆಗಳು ಸೇರಿದಂತೆ ಭೂ ಕುಸಿತ ಸಾಧ್ಯತೆಯ 87 ಜಾಗಗಳನ್ನು ಗುರುತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಸುಬ್ರಮಣ್ಯಕ್ಕೆ ಹೋಗಲು ನಾಲ್ಕು ರಸ್ತೆಗಳಿವೆ ಆದರೆ ಅವುಗಳಲ್ಲಿ ಎರಡು ರಸ್ತೆ ಸಂಪೂರ್ಣ ಬಂದಾಗಿದೆ. ಆದಷ್ಟು ಕುಕ್ಕೆ ಸುಬ್ರಹ್ಮಣ್ಯದ ಪ್ರವಾಸ ಮುಂದೂಡಿ. ದೇವರ ದರ್ಶನಕ್ಕೆ ಬರುವವರು ದೇವರ ದರ್ಶನ ಅಷ್ಟೇ ಮಾಡಿ, ಪ್ರವಾಸಿಗರು ಇಲ್ಲಿನ ರೆಡ್ ಅಲರ್ಟ್ ರಸ್ತೆಗಳಲ್ಲಿ ಪ್ರಯಾಣ ಮಾಡಬಾರದು, ಜಲಪಾತ ಹಾಗೂ ನೀರಿಗೆ ಇಳಿಯುವಂತಿಲ್ಲ. ಯಾವುದೇ ರಸ್ತೆ ಬಿರುಕು ಬಿಟ್ಟಲ್ಲಿ 112 ನಂಬರ್ ಗೆ ಸಂಪರ್ಕ ಮಾಡಿ ಎಂದು ಮಾಹಿತಿ ನೀಡದರು.