ತಿರುವನಂತಪುರ: ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಮೂರು ತಿಂಗಳ ಮಗು ಮೃತಪಟ್ಟಿರುವ ದಾರಣು ಘಟನೆ ಕೇರಳ ತಿರುನವಂತಪುರದ ಪಲ್ಲಿಚಾಲ್‌ನಲ್ಲಿ ನಡೆದಿದೆ. ಇಲ್ಲಿನ ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಯ ಮಗು ಜಿತೇಶ್ ಮೃತ ಪುಟ್ಟ ಶಿಶು. ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಗೆ ಜಿತೇಶ್ ಮೊದಲ ಮಗುವಾಗಿತ್ತು. ಭಾನುವಾರ ಸಂಜೆ ಜಾನಿಮೋಳ್ ಮಗುವಿಗೆ ಎದೆಹಾಲು ಕುಡಿಸಿ ಆತನನ್ನು ಮಲಗಿಸಿದ್ದರು.
ಸೋಮವಾರ ಬೆಳಗ್ಗೆಯಾದರೂ ಮಗು ಎದ್ದಿಲ್ಲ. ಸಂಶಯಗೊಂಡು ತಕ್ಷಣವೇ ದಂಪತಿ ಮಗುವನ್ನು ಬಲರಾಮಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಈ ಹಂತದಲ್ಲಿ ಮಗುವಿನ ಪಲ್ಸ್ ಬಹಳ ಕಡಿಮೆ ಇತ್ತು ಎಂದು ವೈದ್ಯರು ತಿಳಿಸಿದ ಕಾರಣ, ಮಗುವನ್ನು ಎಸ್‌ಐಟಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ತಾಯಿಯ ಎದೆಹಾಲು ಗಂಟಲಿನಲ್ಲಿ ಮತ್ತು ಮಗುವಿನ ಶ್ವಾಸಕೋಶದಲ್ಲಿ ತುಂಬಿಕೊಂಡ ಕಾರಣದಿಂದಾಗಿ ಮಗು ಸಾವು ಕಂಡಿದೆ ಎಂದು ವೈದ್ಯರು ತಿಳಿಸಿದ ಬಗ್ಗೆ ವರದಿಯಾಗಿದೆ.