ಮೈಸೂರು: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಲವ್ ಅಲ್ಲಿ ಬಿದ್ದಿದ್ರಂತೆ. ಹೀಗೊಂದು ವಿಷಯವನ್ನು ಖುದ್ದು ಸಿಎಂ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಪ್ರೀತಿ ಮಾಯೆ… ಅದು ಯಾರನ್ನು ಬೇಕಾದರು ಸೆಳಿಬಹುದು. ಇದೀಗ ರಾಜ್ಯದ ಮುಖ್ಯಮಂತ್ರಿಗಳೂ ಕೂಡಾ ಪ್ರೀತಿಯಲ್ಲಿ ಬಿದ್ದಿದ್ದರು ಅನ್ನುವ ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಮೈಸೂರಿನ್ಲೊ ನಡೆದ ಜನಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್‌ಜಾತಿ ವಿವಾಹಿತರ ನೋಂದಣಿ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ತಮ್ಮ ಕಾಲೇಜು ದಿನಗಳ ಒನ್‌ಸೈಡ್ ಲವ್‌ನ್ನು ಬಿಚ್ಚಿಟ್ಟಿದ್ದಾರೆ.
ಮೊಟ್ಟ ಮೊದಲ ಬಾರಿಗೆ ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊಂಡ ಅವರು ‘ನಾನು ಲಾ ಓದುವಾಗ ಒಂದು ಹುಡುಗಿಯ ಜೊತೆ ಸ್ನೇಹವಿತ್ತು. ಮದುವೆ ಆಗಬೇಕು ಅಂದುಕೊಂಡಿದ್ದೆ. ನನಗೆ ಅಂತರ್ ಜಾತಿ ವಿವಾಹ ಆಗಬೇಕು ಅನ್ನುವ ಆಸೆ ಇತ್ತು. ಆದರೆ ಆ ಹುಡುಗಿ ಒಪ್ಪಲಿಲ್ಲ. ಮನೆಯವರೂ ಒಪ್ಪಿಗೆ ನೀಡಲಿಲ್ಲ’ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ಸ್ಟಷ್ಟನೆ ನೀಡಿದ ಹುಡುಗಿ ಜೊತೆ ಕೇವಲ ಸ್ನೇಹ ಮಾತ್ರ ಇತ್ತು. ಇನ್ನು ಬೇರೆನೂ ಕಲ್ಪನೆ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.