ವಿಜಯ ರಾಘವೇಂದ್ರ ಹಾಗೂ ಸ್ಪಂದನಾ 2007ರ ಆಗಸ್ಟ್ 26ಕ್ಕೆ ಸಪ್ತಪದಿ ತುಳಿದಿದ್ದರು. ಇನ್ನೂ 19 ದಿನಗಳಲ್ಲಿ 16ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ, ಸ್ಪಂದನಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಎಂಇಎಸ್ ಕಾಲೇಜಿನಲ್ಲಿ ಓದುವಾಗ ಸ್ಪಂದನಾ ಮತ್ತು ವಿಜಯ್ ನಡುವೆ ಲವ್ ಶುರುವಾಗಿತ್ತು. ಕಾಫಿಡೇಯಲ್ಲಿ ಇಬ್ಬರು ಮೊದಲ ಬಾರಿಗೆ ಪರಸ್ಪರ ಮಾತನಾಡಿದ್ದರು. ಇವರಿಬ್ಬರ ಪ್ರೀತಿ ವಿಚಾರ ಒಂದೇ ತಿಂಗಳಲ್ಲಿ ಮನೆಯವರಿಗೆ ಗೊತ್ತಾಗಿ, ಮದುವೆ ಮಾಡಿಸಿದ್ದರು.