ಪೈವಳಿಕೆ: ಸಿಪಿಐ ಹಿರಿಯ ನಾಯಕ ಕಾಂ ಗೋಪಣ್ಣ ಪೂಜಾರಿ ಅಮ್ಮೇರಿ ಇವರ ೨೩ನೇ ಚರಮ
ವಾರ್ಷಿಕ ದಿನಾಚರಣೆಯ ನ್ನು ಚಿಪ್ಪಾರು ಅಮ್ಮೇರಿ ಸ್ಮೃತಿ ಮಂಟಪದಲ್ಲಿ ನಡೆಸಲಾಯಿತು. ಸಿಪಿಐ ಮಂಜೇಶ್ವರ ಮಂಡಲ ಸಮಿತಿ ಸದಸ್ಯ ಲಾರೆನ್ಸ್ ಡಿ ಸೋಜ ಉದ್ಘಾಟಿಸಿ ಮಾತನಾಡಿದರು. ಮಾಜಿ ಪಂಚಾಯತ್ ಸದಸ್ಯ ಚಿಪ್ಪಾರು ಸಿಪಿಐ ಬ್ರಾಂಚ್ ಕಾರ್ಯದರ್ಶಿ ಚನಿಯ ದ್ವಜಾರೋಹಣ ಮಾಡಿದರು. ಲೋಕಲ್ ಸಮಿತಿ ಸದಸ್ಯೆ ಪುಷ್ಪ ಜಯರಾಮ್ ಬಾಯಿಕಟ್ಟೆ ಅಧ್ಯಕ್ಷತೆ ವಹಿಸಿದರು. ಲೋಕಲ್ ಸಮಿತಿ ಸದಸ್ಯ ರವಿ ಮಾಂತೇರೋ ಸ್ವಾಗತಿಸಿದರು. ಅಶ್ವಥ್ ಪೂಜಾರಿ ಲಾಲ್ ಬಾಗ್, ರೇಖಾ ಕಿಶೋರ್, ವಿಶ್ವನಾಥ, ಕಿಶೋರ್ ಎ, ರತ್ನಾವತಿ ಆಶೀಶ್ ಅಮ್ಮೇರಿ, ಉಪಸ್ಥಿತರಿದ್ದರು.