ಐಲದಲ್ಲಿ ಕನ್ನಡ ಉಸಿರು ಸುಮಧುರ ಗೀತೆಗಳ ಗಾಯನ

Share with

ಉಪ್ಪಳ: ರಂಗ ಚಿನ್ನಾರಿ ಕಾಸರಗೋಡು ( ರಿ) ಇದರ ಸಂಗೀತ ಘಟಕ ಸ್ವರ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ತರುಣ ಕಲಾ ವೃಂದ ಐಲ ಉಪ್ಪಳ ಏರ್ಪಡಿಸಿದ ಕಾಸರಗೋಡು ಕನ್ನಡ ಹಬ್ಬ ಪ್ರಯುಕ್ತ ಸುಮಧುರ ಗೀತೆಗಳ ಗಾಯನ ಕನ್ನಡ ಉಸಿರು ಕರ‍್ಯಕ್ರಮವನ್ನು ಐಲ ಶ್ರೀ ದರ‍್ಗಾ ಪರಮೇಶ್ವರಿ ಕಲಾ ಭವನದಲ್ಲಿ ಖ್ಯಾತ ನಟರು* ಸಾಹಿತಿಯೂ ಅದ ಶಶಿರಾಜ್ ಕಾವೂರು ಇವರು ಇತ್ತೀಚೆಗೆ ಉದ್ಘಾಟಿಸಿ,ಕಲಾ ಪ್ರೇಮಿಗಳಿಗೆ ಸ್ವರ ಚಿನ್ನಾರಿಯು ರಸ ನಿಮಿಷ ಗಳನ್ನು ನೀಡಿದೆ ಎಂದು ತಿಳಿಸಿದರು* ಐಲ ಕ್ಷೇತ್ರದ ಆಡಳಿತ ಮೊಕ್ತೇಸರರಾದ. ಕೋಡಿ ಬೈಲು ನಾರಾಯಣ ಹೆಗ್ಡೆ ಯವರು ಕರ‍್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದರು.. ಕನ್ನಡ ಉಸಿರು ಇದರ ಸಂಚಾಲಕರು ಅದ ಕಾಸರಗೋಡು ಚಿನ್ನಾ ರವರು ಕಾಸರಗೋಡಿನ ಕಲಾ ಪ್ರತಿಭೆ ಗಳಿಗೆ ಒಂದು ವೇದಿಕೆ ಯನ್ನು ನೀಡುವುದು, ಆ ಮೂಲಕ ಅವರ ಪ್ರತಿಭೆಯನ್ನು ಪ್ರಕಾಶಿಸಲು ಅವಕಾಶ ನೀಡುವುದು ಸ್ವರ ಚಿನ್ನಾರಿಯ ಉದ್ದೇಶವಾಗಿದೆ ಎಂದು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ನಟರು ಗಾಯಕರೂ ಆಗಿರುವ ಮೈಮ್ ರಾಮದಾಸ್ ರವರು ಭಾಗವಹಿಸಿದರು.ಇವರು ತಮ್ಮ ಸುಮಧುರ ಕಂಠದಿಂದ ಸುಮಧುರ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು ಈ ಸಂರ‍್ಭದಲ್ಲಿ ಸ್ಥಳೀಯ ಪ್ರತಿಭೆ ಸಂಗೀತ ಗುರುಗಳು ಆಗಿರುವ ಸುನೀತ ಬೈ ಪಡಿತ್ತಾಯ ಇವರನ್ನು ಸನ್ಮಾನಿಸಾಯಿತು.. ಐಲ ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷರಾದ ಮಜಲು ಶಂಕರ ನಾರಾಯಣ ಹೊಳ್ಳ, ರಂಗ ಚಿನ್ನಾರಿ ಯ* ನರ‍್ದೇಶಕರಾದ ಸತೀಶ್ ಚಂದ್ರ ಭಂಡಾರಿ ಹಾಗೂ ಶ್ರೀ ಕೆ ಸತ್ಯ ನಾರಾಯಣ ಇವರು ಉಪಸ್ಥಿತರಿದ್ದರು ಕಮಲಾಕ್ಷ ಐಲ ಸ್ವಾಗತಿಸಿ ಉದಯಕುಮಾರ್ ಐಲ ವಂದಿಸಿದರು. ಸರಿತಾ ರಾಮ್ ಸನ್ಮಾನಿತರ ಪರಿಚಯ ಮಾಡಿದರು. ಪದ್ಮಾ ಮೋಹನದಾಸ್ ಕರ‍್ಯಕ್ರಮ ನಿರೂಪಿಸಿದರು. ಕಾಸರಗೋಡಿನ ಹಲವಾರು ಕಲಾ ಪ್ರತಿಭೆ ಗಳು ಹಿನ್ನಲೆ ಸಂಗೀತಗಾರ ರಾಗಿಯೂ ಹಾಡುಗಾರರಾಗಿಯೂ ಕನ್ನಡ ಉಸಿರು ಸುಮಧುರ* *ಗೀತೆಗಳ ಗಾಯನವನ್ನು ಪ್ರೇಕ್ಷಕರ ಮುಂದಿರಿಸಿ ಮೆಚ್ಚುಗೆ ಗೆ ಪಾತ್ರರಾದರು


Share with

Leave a Reply

Your email address will not be published. Required fields are marked *