ಬಂಡೆಗಲ್ಲಿನ ಮೇಲೆ ಜಲಚರಗಳ ಚಿತ್ರ ಬಿಡಿಸಿ ಪರಿಸರ ಜಾಗೃತಿ

Share with

ಚಿತ್ರಕಾರ ಸಂತೋಷ ಮಾಳ ಬಳಗದಿಂದ ವಿನೂತನ ಪ್ರಯತ್ನ

ಹತ್ತು ಚೀಲ ಪ್ಲಾಸ್ಟಿಕ್, 200ಕ್ಕೂ ಹೆಚ್ಚು ಬಿಯರ್ ಬಾಟಲಿ  ಹೊರತೆಗೆದು ನದಿತೀರ ಸ್ವಚ್ಛ

ಉಡುಪಿ: ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸ್ಥಳೀಯರು ಪ್ರವಾಸಿಗರು ಆಗಮಿಸಿ ಅಲ್ಲಲ್ಲಿ ನದಿ ತೀರದ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಹಾಗೂ ಬಿಯರ್ ಬಾಟಲಿಗಳನ್ನು ಹಾಕಿ ಪರಿಸರವನ್ನು ಹಾಳುಗೆಡವುತಿದ್ದಾರೆ .ಇದನ್ನರಿತ  ಮೂಡುಬಿದಿರೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಜಿ.ಡಿ. ದಿನೇಶ್ ನೇತೃತ್ವದಲ್ಲಿ ಪರಿಸರ ಉಳಿಸಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರವನ್ನು ಜಾಗೃತಿ ಮೂಡಿಸುತ್ತಿದ್ದಾರೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಹರಿಯುವ ನದಿಗಳ ಬದಿಗಳಲ್ಲಿ  ಪ್ಲಾಸ್ಟಿಕ್ ಬಿಯರ್ ಬಾಟಲಿಗಳು ಹೆಚ್ಚುತಿದ್ದು, ಇದನ್ನರಿತ ಮೂಡುಬಿದಿರೆ ವಲಯ ಅರಣ್ಯಾಧಿಕಾರಿಗಳ ತಂಡವು ಮಾಳದ ಖ್ಯಾತ ಚಿತ್ರಕಾರ ಸಂತೋಷ ಮಾಳ ಹಾಗೂ ವಿಷ್ಣು ಮೂರ್ತಿ ಬಳಗದ ಸದಸ್ಯರು ಒಟ್ಟಾಗಿ ಮಾಳದ  ದೇವರಗುಂಡಿ ಪ್ರದೇಶಕ್ಕೆ ತೆರಳಿ ಹತ್ತು ಚೀಲ ಪ್ಲಾಸ್ಟಿಕ್ ಹಾಗೂ 200ಕ್ಕೂ ಹೆಚ್ಚು ಬಿಯರ್ ಬಾಟಲಿಗಳನ್ನು ನದಿ ತೀರದ ಬದಿಗಳಲ್ಲಿ, ಬಂಡೆಗಲ್ಲುಗಳಿಂದ ಹೊರಗೆ ತೆಗೆದು ಸ್ವಚ್ಚಗೊಳಿಸಿದ್ದಾರೆ.
ಪ್ಲಾಸ್ಟಿಕ್ ಹಾಗೂ ಬಿಯರ್ ಬಾಟಲಿಗಳನ್ನು ಸ್ವಚ್ಚಗೊಳಿಸಿದ ಬಳಿಕ ಯಾವುದೇ ವಸ್ತುಗಳನ್ನು ಹಾಕದಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಸುಮಾರು ಹದಿನೈದು ಅಡಿ ಉದ್ದದ ಬಂಡೆಗಲ್ಲಿನ ಮೇಲೆ ಚಿತ್ರ ಬಿಡಿಸಿ ಮೇಲೆ ನೈಸರ್ಗಿಕ  ಬಣ್ಣಗಳನ್ನು ಬಳಸಿ ಮೀನು ಆಮೆ , ಜಲಚರಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಪರಿಸರವನ್ನು ಸಂರಕ್ಷಣೆಯ ಮಾಹಿತಿ ಬಿತ್ತಿ ಚಿತ್ರಗಳನ್ನು ಅಂಟಿಸಿ ಅರಿವು ಮೂಡಿಸುವ ವಿನೂತನ ಪ್ರಯತ್ನ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *