ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಪೊಲೀಸರು ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಔಷಧೀಯ ಖರ್ಚಿಗಾಗಿ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪೊಲೀಸ್ ಠಾಣೆಯ ಕೆಲಸಕ್ಕೆ ಬರುತ್ತಿದ್ದ ವನಿತಾ ಎಂಬ ಮಹಿಳೆಗೆ ಬಂಟ್ವಾಳ ಗ್ರಾಮಾಂತರ ಎಸ್.ಐ ಹರೀಶ್ ಅವರ ಮುಂದಾಳತ್ವದಲ್ಲಿ ಸುಮಾರು 27,000 ಸಾವಿರ ನಗದು ಹಣವನ್ನು ನೀಡಿದ್ದಾರೆ. ಬಂಟ್ವಾಳ ಪೇಟೆ ನಿವಾಸಿಯಾಗಿರುವ ವನಿತ ಅವರ ಕುಟುಂಬ ತೀರಾ ಬಡತನದಾಗಿದ್ದು, ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಶುಚಿತ್ವದ ಕೆಲಸಕ್ಕೆ ಬರುತ್ತಿದ್ದರು. ಆದರೆ ಇತ್ತೀಚೆಗೆ ಮನೆಯ ಸಮೀಪ ಬಿದ್ದು ಕೈಯ ಮೂಳೆ ಮುರಿತಕ್ಕೆ ಒಳಗಾಗಿ ಕೆಲಸಕ್ಕೆ ಬರಲು ಅಸಾಧ್ಯವಾಗಿತ್ತು.
ಕಳೆದ ಕೆಲವು ತಿಂಗಳ ಕಾಲ ದುಡಿಮೆ ಇಲ್ಲದೆ ಕಷ್ಟದ ಸ್ಥಿತಿಯಲ್ಲಿರುವ ವನಿತಾ ಅವರ ಮನೆಯ ಪರಿಸ್ಥಿತಿ ತಿಳಿದ ಬಂಟ್ವಾಳ ಪೋಲೀಸರು ಠಾಣೆಯಲ್ಲಿ ಸಿಬ್ಬಂದಿಗಳಿಂದ ಒಟ್ಟುಗೂಡಿಸಿದ ಹಣವನ್ನು ಹಸ್ತಾಂತರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.