ಮಳೆರಾಯನ ಆಗಮನ ವಾಗಿದ್ದರೂ ಇನ್ನೂ ಕುಡಿ ನೀರು ಯೋಜನೆಯ ಬಾವಿಯಲ್ಲಿ ನೀರಿಲ್ಲ

Share with

ಉಪ್ಪಳ: ಕಳೆದ ಹಲವು ದಿನಗಳಿಂದ ಮಳೆ ಸುರಿದರೂ ಕುಡಿನೀರು ಯೋಜನೆಯ ಬಾವಿಯಲ್ಲಿ  ನೀರು ತುಂಬದ ಕಾರಣ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೆ ವಿತರಿಸುವ ನಳ್ಳಿ ನೀರು ಮೊಟಕುಗೊಂಡು ಒಂದು ತಿಂಗಳು ಕಳೆದಿದ್ದು, ಇದರಿಂದ ನಳ್ಳಿ ನೀರನ್ನೇ ಆಶ್ರಯಿಸುತ್ತಿರುವ  ಹಲವು ಕುಟುಂಬಗಳು  ಸಂಕಷ್ಟಕ್ಕೀಡಾಗಿದ್ದಾರೆ. ಪ್ರತಾಪನಗರ, ತಿಂಬರ,  ಪುಳಿಕುತ್ತಿ ಸಹಿತ ವಿವಿಧ ಪ್ರದೇಶಗಳ ಜನರು ನೀರಿಗಾಗಿ ವಿವಿಧ  ಖಾಸಾಗಿ ಬಾವಿಯನ್ನು ಆಶ್ರಯಿಸುತ್ತಿದ್ದು, ಇನ್ನು ಕೆಲವರು ಹಣ ನೀಡಿಯೂ ನೀರು ತರಬೇಕಾದ ಪರಿಸ್ಥಿತಿ ಉಂಟಾಗಿರುವುದಾಗಿ ದೂರಲಾಗಿದೆ.  ಉಪ್ಪಳ ಹೊಳೆಯ ಕೊಡಂಗೆ ಎಂಬಲ್ಲಿ ಕುಡಿನೀರಿನ ಬಾವಿಯಲ್ಲಿ ಬೇಸಿಗೆಯಲ್ಲಿ ಸಂಪೂರ್ಣ ನೀರು ಬತ್ತಿಹೋಗಿತ್ತು. ಇದೀಗ ಕೆಲವು ದಿನಗಳಿಂದ ಸುರಿದ ಮಳೆಗೆ ಒಂದೆರಡು ಅಡಿ ನೀರು ಮಾತ್ರವೇ ತುಂಬಿಕೊAಡಿದೆ. ಈ ನೀರನ್ನು  ಪಂಪ್ ಮಾಡಿದರೆ ಎರಡು ಕಿಲೋ ಮೀಟರ್ ದೂರದ ಬೇಕೂರಿನಲ್ಲಿರುವ ಟ್ಯಾಂಕ್‌ಗೆ  ತಲುಪದು ಎಂದು ಉದ್ಯೋಗಸ್ಥರು ತಿಳಿಸಿದ್ದಾರೆ. ಮಳೆಗಾಲ ಆರಂಭಗೊAಡರೆ ಮಾತ್ರವೇ ನೀರು ವಿತರಿಸಲು ಸಾದ್ಯವೆನ್ನಲಾಗಿದೆ.  ಪಂಚಾಯತ್‌ನಿಂದ ಹಲವು ದಿನಗಳಿಗೊಮ್ಮೆ ವಿತರಿಸುವ ನೀರನ್ನು ದಿನನಿತ್ಯ ವಿತರಿಸಲು ಸಂಬAಧಪಟ್ತ ಅಧಿಕೃತರು ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *