ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ “Resume Writing and Interview Preparation” ವಿಷಯದ ಕುರಿತು ಕಾರ್ಯಾಗಾರ

Share with

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ ಲ್ಲಿ ಅಂತಿಮ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ “Resume Writing and Interview Preparation” ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕರಾದ ಡಾ. ಶ್ರೀಶ ಭಟ್, ವಿದ್ಯಾರ್ಥಿಗಳಿಗೆ Resume Writing ಬಗ್ಗೆ ಮಾಹಿತಿಯನ್ನು ನೀಡಿ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳ Resume ಹೇಗಿರಬೇಕು,ಯಾವೆಲ್ಲ ವಿಷಯಗಳನ್ನು ಒಳಗೊಂಡಿರಬೇಕು, ವಿದ್ಯಾರ್ಥಿಗಳು ಮಾಡುವಂತಹ ತಪ್ಪುಗಳು, ಇವುಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಹೊಸ ಮಾದರಿಯ Resume ತಯಾರಿಸಲು ಸಹಾಯ ಮಾಡಿದರು.  

ಹಾಗೆಯೇ ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಾಫ್ಟ್ ವೇರ್ ಇಂಜಿನಿಯರ್ of Accenture ಶ್ರೀ. ಅವಿನಾಶ್ ವಿಕೆ ವಿದ್ಯಾರ್ಥಿಗಳಿಗೆ ಇಂಟರ್ವ್ಯೂ ಗೆ ಬೇಕಿರುವಂತಹ ತಯಾರಿ ಹಾಗೂ ಅದನ್ನು ಎದುರಿಸುವ ಸವಾಲುಗಳ ಬಗ್ಗೆ ಮನವರಿಕೆ ಮಾಡಿ ಅವರನ್ನು ಹುರಿದುಂಬಿಸಿದರು. ಸುಮಾರು 70 ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.
 
ಅಂತಿಮ ಫ್ಯಾಶನ್ ಡಿಸೈನ್ ಪದವಿ ವಿದ್ಯಾರ್ಥಿಗಳಾದ ಕುಮಾರಿ ಶ್ರದ್ಧಾ ಹಾಗೂ ಕುಮಾರಿ ಸ್ಮಿತಾ ಪ್ರಾರ್ಥಿಸಿದರು. ಅಂತಿಮ ಬಿಕಾಂ ಪದವಿಯ ವಿದ್ಯಾರ್ಥಿ ಮಹಮದ್ ಮುಸ್ತಫ ಬಿಎ ಸ್ವಾಗತಿಸಿ, ಅಂತಿಮ ಇಂಟೀರಿಯರ್ ಡಿಸೈನ್ ಪದವಿ ವಿದ್ಯಾರ್ಥಿನಿ ಕುಮಾರಿ ರಿಯಾ ಪೊನ್ನಮ್ಮ ವಂದಿಸಿದರು. ಕುಮಾರಿ ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.


Share with

Leave a Reply

Your email address will not be published. Required fields are marked *