60 ವರ್ಷಗಳ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಲು ಕೇಂದ್ರ ಅಟಲ್ ಪಿಂಚಣಿ ಯೋಜನೆ ಜಾರಿಗೆ ತಂದಿದೆ.
ಇದರಲ್ಲಿ ಉಳಿತಾಯ ಮಾಡಿದರೆ ತಿಂಗಳಿಗೆ ರೂ 1000, 2000, 3000, 5000 ದವರೆಗೆ ಪಿಂಚಣಿ ಪಡೆಯಬಹುದು. 18-40 ವರ್ಷದೊಳಗಿನವರು ಅಂಚೆ ಕಚೇರಿ/ ಬ್ಯಾಂಕ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಬಹುದು.
ತಿಂಗಳಿಗೆ ಪಾವತಿಸುವ ಪ್ರೀಮಿಯಂ, ವಯಸ್ಸು & ಆಯ್ಕೆ ಮಾಡಿದ ಪಿಂಚಣಿ ಮೊತ್ತವನ್ನು ಅವಲಂಬಿಸಿ ಬದಲಾಗುತ್ತದೆ. ವ್ಯಕ್ತಿ ಸತ್ತರೆ ನಾಮಿನಿಗೆ ಪ್ರಯೋಜನವಾಗಲಿದ್ದು, ಟ್ಯಾಕ್ಸ್ ಬೆನಿಫಿಟ್ಸ್ ಕೂಡ ಪಡೆಯಬಹುದು.