ಕರಿಬೇವಿನ ಎಲೆಗಳ ಜ್ಯೂಸ್ ಸೇವನೆಯಿಂದ ಎಷ್ಟೊಂದು ಉಪಯೋಗ ಗೊತ್ತಾ? ತೂಕ ಇಳಿಸುವಿಕೆಯಲ್ಲಿ ಪ್ರಮುಖವಾಗಿದೆ ಈ ಕರಿಬೇವು

Share with

ಕರಿಬೇವು

ಕರಿಬೇವಿನ ಸೊಪ್ಪು ಹೆಚ್ಚಾಗಿ ಎಲ್ಲಾ ಸಾಂಬಾರು ಪದಾರ್ಥಗಳಿಗೆ ಬಳಸಲಾಗುತ್ತದೆ. ವಿಶೇಷವಾದ ರುಚಿ ಹಾಗೂ ಆಯುರ್ವೇದ ಗುಣಗಳನ್ನು ಈ ಕರಿಬೇವು ಸೊಪ್ಪು ಹೊಂದಿದೆ. ಕರಿಬೇವು ಸುವಾಸನೆಯನ್ನು ಮಾತ್ರವಲ್ಲದೆ, ಕೆಲವು ರೋಗಗಳ ನಿವಾರಣೆಗೂ ಸಹಾಯಕವಾಗಿದೆ. ಕರಿಬೇವಿನ ಎಲೆ ಮತ್ತು ರಸವನ್ನು ಕುಡಿದರೆ ಏನೆಲ್ಲಾ ಪ್ರಯೋಜನ ನೋಡೋಣ..

ಕರಿಬೇವಿನ ಎಲೆಗಳನ್ನು ದಿನನಿತ್ಯದ ಅಡಿಗೆಗಳಲ್ಲಿ ಬಳಸುತ್ತೇವೆ, ಇದರಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಹಾಗೂ ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಪ್ರಚುರವಾಗಿವೆ. ಇದು ದೇಹಕ್ಕೆ ವಿವಿಧ ರೀತಿಯಲ್ಲಿ ಉತ್ತಮ ಪ್ರಯೋಜನ ನೀಡುತ್ತದೆ. ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಕೆಗೆ ಮಾತ್ರವಲ್ಲದೆ, ಕರಿಬೇವಿನ ಎಲೆಗಳು ಅಗತ್ಯ ವಿಟಮಿನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ಬಾಷ್ಪಶೀಲ ಎಣ್ಣೆಗಳಿಂದ ತುಂಬಿರುವುದರಿಂದ ಮಧುಮೇಹವನ್ನು ನಿಯಂತ್ರಿಸುವಲ್ಲಿ, ಹೃದಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ, ಸೋಂಕುಗಳನ್ನು ತಡೆಗಟ್ಟುವಲ್ಲಿ ಹಾಗೂ ಸುಂದರವಾದ ಕೂದಲು ಮತ್ತು ತ್ವಚೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕರಿಬೇವಿನ ಎಲೆಗಳು ತೂಕ ಇಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಈ ಎಲೆಗಳನ್ನು ಹಸಿಯಾಗಿ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಿದರೆ ದೇಹವನ್ನು ಒಳಗಿನಿಂದ ಶುದ್ಧೀಕರಿಸಲು, ಕೊಬ್ಬನ್ನು ಸುಡಲು, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಡಿಟಾಕ್ಸ್ ಪಾನೀಯವಾಗಿ ಕೆಲಸ ನಿರ್ವಹಿಸುತ್ತದೆ.

100 ಗ್ರಾಂ ಕರಿಬೇವಿನ ಎಲೆಯಲ್ಲಿರುವ ಪೋಷಕಾಂಶಗಳು:

100 ಗ್ರಾಮ ಕರಿಬೇವಿನ ಎಲೆಗಳಲ್ಲಿ ಕಾರ್ಬೋಹೈಡ್ರೇಟ್ಸ್ – 18.7 ಗ್ರಾಂ, ಫೈಬರ್ – 6.4 ಗ್ರಾಂ, ಪ್ರೋಟೀನ್ – 6 ಗ್ರಾಂ, ಖನಿಜಗಳು- 4 ಗ್ರಾಂ, ಕ್ಯಾಲ್ಸಿಯಂ – 830. ಮಿಗ್ರಾಂ, ರಂಜಕ – 57. ಮಿಗ್ರಾಂ ಇದೆ.

ಕರಿಬೇವಿನ ಎಲೆಗಳ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ?

ಕರಿಬೇವಿನ ಎಲೆಗಳಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನೀವೂ ತೂಕ ಇಳಿಸುವ ಯೋಚನೆ ಹೊಂದಿದ್ದರೆ, ಕರಿಬೇವಿನ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಪ್ರಯೋಜನಗಳು ಸಿಗುತ್ತವೆ. ಕರಿಬೇವಿನ ಎಲೆಗಳಲ್ಲಿರುವ ರೋಮರನ್ ಈಥೈಲ್ ಅಸಿಟೇಟ್ ಮತ್ತು ಮುಂಬೈನ್ ನಂತಹ ಪ್ರಮುಖ ಅಂಶಗಳು ತೂಕ ನಷ್ಟದ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ರಕ್ತಹೀನತೆ
ಕರಿಬೇವಿನ ರಸವನ್ನು ಸೇವಿಸುವುದರಿಂದ ರಕ್ತದಲ್ಲಿ ಇರುವ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಿಬೇವಿನ ರಸವನ್ನು ಸೇವಿಸುವುದರಿಂದ ಇಮ್ಯೂನಿಟಿ ಬೂಸ್ಟ್ ಹೆಚ್ಚಾಗುತ್ತದೆ. ಕರಿಬೇವಿನಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳು ಹೆಚ್ಚಿದ್ದು, ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇನ್ನೂ ಕರಿಬೇವಿನ ಎಲೆಗಳ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹವನ್ನು ವೈರಸ್‌ಗಳು ಮತ್ತು ಸೋಂಕುಗಳಿಂದ ರಕ್ಷಿಸಲು ಸಹಾಯಕಾರಿಯಾಗಿದೆ.

ಮಧುಮೇಹ
ಕರಿಬೇವಿನ ಎಲೆಗಳ ರಸ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಾಯಕ. ಕರಿಬೇವಿನ ಎಲೆಗಳಲ್ಲಿ ಹೈಪೊಗಿ ಸಿಮಿಕ್ ಗುಣಲಕ್ಷಣಗಳು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಸೋಂಕಿಗೆ ಕರಿಬೇವಿನ ಎಲೆಗಳ ರಸ ಉತ್ತಮ ಚಿಕಿತ್ಸೆಯಾಗಿದ್ದು, ಸೋಂಕನ್ನು ತಡೆಗಟ್ಟಲು ಕರಿಬೇವಿನ ಎಲೆಗಳ ರಸವನ್ನು ಬಳಸಬಹುದು. ಈ ಎಲೆಗಳಲ್ಲಿ ಇರುವ Antibiotic ಮತ್ತು Antifungal ಗುಣಗಳು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ
ಹೌದು, ಕರಿಬೇವಿನ ಎಲೆಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯದ ಗುಣಗಳನ್ನು ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ರಸವನ್ನು ಸೇವಿಸುವುದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಕರುಳಿನ ಗೋಡೆಗಳನ್ನು ಸರಿಪಡಿಸುತ್ತದೆ. ಇದು ದೇಹದಿಂದ ವಿಷವನ್ನು ನಿವಾರಿಸುವ ಶಕ್ತಿಯುತ ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸಿಕೊಳ್ಳುತ್ತದೆ ಮತ್ತು ತಾಜಾ ಎಲೆಗಳು ವಾಕರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ದಿನಕ್ಕೆ ಮೂರರಿಂದ ನಾಲ್ಕು ಎಲೆಗಳನ್ನು ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಕರಿಬೇವಿನ ಸೊಪ್ಪಿನ ರಸ ಮಾಡುವ ವಿಧಾನ

ಮನೆಯಲ್ಲಿ ಕರಿಬೇವಿನ ಸೊಪ್ಪಿನ ರಸವನ್ನು ತಯಾರಿಸುವ ವಿಧಾನ:

  1. ತಾಜಾ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ತಣ್ಣೀರಿನಲ್ಲಿ ಚೆನ್ನಾಗಿ ತೊಳೆಯಿರಿ.
  2. ಎರಡು ಲೋಟ ನೀರು ಹಾಕಿ ಅದನ್ನು ಚನ್ನಾಗಿ ಕುದಿಸಿ. ನೀರು ಅರ್ಧಕ್ಕೆ ಕಡಿಮೆಯಾದಾಗ, ಕರಿಬೇವಿನ ಎಲೆಗಳ ನೀರನ್ನು ಜರಡಿ ಸಹಾಯದಿಂದ ಫಿಲ್ಟರ್ ಮಾಡಿ.
  3. ಈಗ ಈ ನೀರಿಗೆ ರುಚಿಗೆ ತಕ್ಕಂತೆ 1 ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.
  4. ನೀವು ಇಷ್ಟಪಟ್ಟಿದ್ದರೆ ಈ ರಸಕ್ಕೆ ಕರಿಮೆಣಸು ಅಥವಾ ಉಪ್ಪನ್ನು ಸಹ ಬಳಸಬಹುದು.

ಇಂತಹ ಆರೋಗ್ಯಕರ ರಸ ನೀವು ನಿಯಮಿತವಾಗಿ ಸೇವಿಸಿ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು.


Share with

Leave a Reply

Your email address will not be published. Required fields are marked *