ವಿಟ್ಲ: ಉಕ್ಕುಡ ಕನ್ಯಾನ ರಸ್ತೆಯಲ್ಲಿ ಸಂಚಾರ ಮಾಡುವ ಮಣ್ಣಿನ ಲಾರಿಯ ಅಬ್ಬರಕ್ಕೆ ಇಕೋ ವಾಹನ ಜಖಂಗೊಂಡಿದೆ. ಕನ್ಯಾನ ಕಡೆಯಿಂದ ಬರುತ್ತಿದ್ದ ಬಾಕ್ಸೈಟ್ ಮಣ್ಣಿನ ಲಾರಿ ಕೇಪಳಗುಡ್ಡೆ ತಿರುವಿನಲ್ಲಿ ದೇಲಂತಬೆಟ್ಟು ಕಡೆಯಿಂದ ಬರುತ್ತಿದ್ದ ಇಕೋ ವಾಹನಕ್ಕೆ ಡಿಕ್ಕಿಯಾಗಿದೆ. ಘಟನೆಯಿಂದ ಇಕೋ ವಾಹನದ ಬಲ ಭಾಗ ಸಂಪೂರ್ಣ ಜಖಂಗೊಂಡಿದೆ
ದೇಲಂತಬೆಟ್ಟು ನಿವಾಸಿ ಅವಿಲ್ ಡಿಸೋಜ ಅವರಿಗೆ ಸೇರಿದ ಇಕೋ ವಾಹನವಾಗಿದ್ದು, ಕನ್ಯಾನ ಮೂಲಕ ಮಂಗಳೂರು ಕಛೇರಿಗೆ ತೆರಳಿದ್ದ ಸಂದರ್ಭ ಈ ಘಟನೆ ನಡೆದಿದೆ. ಸ್ಥಳಕ್ಕೆ 112 ತುರ್ತು ವಾಹನ ಬಂದಿದ್ದು, ವಾಹನಗಳನ್ನು ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ವಿಟ್ಲ ಠಾಣೆಗೆ ಪಶ್ಚಿಮ ವಲಯ ಐಜಿಪಿ ಆಗಮಿಸಿದ್ದ ಸಂದರ್ಭದಲ್ಲಿ ಮಣ್ಣು ಸಾಗಾಟ ಲಾರಿಗಳಿಂದ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರೂ ಮಣ್ಣಿನ ಲಾರಿಗಳ ಅಬ್ಬರ ಮಾತ್ರ ನಿಂತಿಲ್ಲ.