
ಬೆಂಗಳೂರು: ಕರ್ನಾಟಕ ಓನ್ ಕೇಂದ್ರಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಿಢೀರ್ ಭೇಟಿ ನೀಡಿದ್ದಾರೆ. ಕನಕಪುರದ ಎಸ್.ಎಲ್ ವಿ ರಸ್ತೆಯ ಕರ್ನಾಟಕ ಒನ್ ಕೇಂದ್ರ ಪರಿಶೀಲನೆ ಮಾಡಿ, ಗೃಹಲಕ್ಷ್ಮೀ ಅರ್ಜಿ ನೊಂದಣಿ ವೀಕ್ಷಣೆ ಮಾಡಿದರು. ಈ ವೇಳೆ ಮಹಿಳೆಯರಿಗೆ ಶುಭಕೋರಿ ನೋಂದಣಿ ಪತ್ರ ವಿತರಿಸಿದರು. ಇದೇ ವೇಳೆ ನನ್ನ, ಸಿದ್ದರಾಮಯ್ಯ ಫೋಟೋ ಜೊತೆಯಲ್ಲಿ ಬರುವ ಹಾಗೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು. ಇದರ ಜತೆಗೆ ಅರ್ಜಿ ಸಲ್ಲಿಸಲು ಬಂದವರ ಜೊತೆಗೆ ಉಭಯ ಕುಶಲೋಪರಿ ವಿಚಾರಿಸಿದರು.