ನವದೆಹಲಿ: 8 ವರ್ಷದ ಪೋರಿಯೊಬ್ಬಳು “ಫಾದರ್ ಆನ್ ಸೇಲ್” ಅಂತಾ ಪೇಪರ್ನಲ್ಲಿ ಬರೆದು ಮನೆಯ ಬಾಗಿಲಿಗೆ ನೇತು ಹಾಕಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ತಂದೆ ಮೇಲಿನ ಆಕೆಯ ತುಂಟ ಪ್ರತೀಕಾರ ಕಂಡು ನೆಟ್ಟಿಗರೂ ಹುಬ್ಬೇರಿಸಿದ್ದಾರೆ.
ಆಕೆ “ಫಾದರ್ ಆನ್ ಸೇಲ್” ಎಂದು ಬರೆದು ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾಳೆ. ಅಷ್ಟೇ ಅಲ್ಲದೇ ತಂದೆಯನ್ನು 2 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ನೋಟಿಸ್ನಲ್ಲಿ ಬರೆದಿದ್ದಾಳೆ. ಇದನ್ನು ಮೆಲನ್ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ಅವರು ತಮ್ಮ ಪುತ್ರಿಯ ಯಾವುದೋ ಬೇಡಿಕೆಯನ್ನು ನಿರಾಕರಿಸಿದ್ದಾರೆ.
ಇದರಿಂದ ಕೋಪಗೊಂಡ ಅವರ 8 ವರ್ಷದ ಮಗಳು 2 ಲಕ್ಷ ರೂ.ಗಳಿಗೆ ಅಪ್ಪನನ್ನು ಮಾರಾಟ ಮಾಡುತ್ತಿದ್ದೇನೆ, ಹೆಚ್ಚಿನ ಮಾಹಿತಿಗಾಗಿ ಡೋರ್ ಬೆಲ್ ಮಾಡಿ ಎಂದು ಫಲಕ ಬರೆದು ನೇತು ಹಾಕಿ, ಪ್ರತೀಕಾರ ತೆಗೆದುಕೊಂಡಿದ್ದಾಳೆ.ಇದನ್ನು ಟ್ವಿಟರ್ನಲ್ಲಿ ಮೆಲನ್ ಹಂಚಿಕೊಂಡಿದ್ದು, ಬಹುಶಃ ನನ್ನ ಮೌಲ್ಯ ಇಷ್ಟೇ ಎಂದು ಹಾಸ್ಯ ಮಾಡಿದ್ದಾರೆ. ಸದ್ಯ ಆಕೆ ಬರೆದ ನೋಟಿಸ್ ಭಾರಿ ವೈರಲ್ ಆಗಿದೆ. ಈ ಪೋಸ್ಟ್ಗೆ ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.