ವಿದ್ಯುತ್ ಟವರ್ ಧರಶಾಯಿ: ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿ

Share with

ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ಬೆಳ್ತಂಗಡಿಯ ಉಜಿರೆ-ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಗುರುವಾಯನಕೆರೆ-ಧರ್ಮಸ್ಥಳ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ನ ಟವರ್ ಕುಸಿದು ಬಿದ್ದು ಒಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿಯಾದ ಘಟನೆ ರವಿವಾರ ರಾತ್ರಿ ಸಂಭವಿಸಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ನ ಟವರ್ ಕುಸಿದು ಬಿದ್ದು ಒಂದು ಕಾರು ಹಾನಿ.
ಟವರ್ ಕುಸಿದು ಬಿದ್ದು ದ್ವಿಚಕ್ರ ವಾಹನಕ್ಕೆ ಹಾನಿ.

ವಿದ್ಯುತ್ ಟವರ್ ನೆಲದತ್ತವಾಲುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಉಜಿರೆ ಉಪವಿಭಾಗಕ್ಕೆ ಮಾಹಿತಿಯನ್ನು ತಿಳಿಸಿದ್ದರು. ಕೂಡಲೇ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಪವರ್ ಪ್ರೊಜೆಕ್ಟ್ ನ ಅಧಿಕಾರಿಗಳು ಒಂದು ಕಾರು ಮತ್ತು ಬೈಕ್ ನಲ್ಲಿ ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿ, ಪರಿಶೀಲನೆಗೆ ತೆರಳುತ್ತಿದ್ದಂತೆ ವಿದ್ಯುತ್ ಟವರ್ ವಾಹನಗಳ ಮೇಲೆಯೇ ಕುಸಿದು ಬಿದ್ದಿದೆ ಎನ್ನಲಾಗಿದೆ.  ಕಾರಿನಲ್ಲಿ ಪವರ್ ಪ್ರಾಜೆಕ್ಟ್ ನ ಗಣೇಶ್ ಎಂಬವರಿದ್ದು, ಸಣ್ಣ ಪುಟ್ಟ ಗಾಯಕ್ಕೊಳಗಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *