Pigmentation: ಮುಖದ ಸೌಂದರ್ಯದ ಬಗ್ಗೆ ಯಾರಿಗೆ ಒಲವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳಿಗೆ ಮುಖದ ಸೌಂದರ್ಯದಲ್ಲಿ ಒಂದುಪಟ್ಟು ಹೆಚ್ಚು ಕಾಳಜಿ. ಮುಖದ ಕಾಂತಿಯನ್ನು ಹೆಚ್ಚಿಸಲು ಮತ್ತಷ್ಟು ಹೊಳಪನ್ನು ಕಾಣಲು ಬ್ಯೂಟಿಪಾರ್ಲರ್ ಗಳ ಮೊರೆ ಹೋಗುತ್ತಾರೆ. ಈ ನಡುವೆ ಮುಖದ ಸೌಂದರ್ಯವನ್ನು ಹಾಳು ಮಾಡುವುದು ಬಂಗು ಅಂದರೆ ಹೈಪರ್ ಪಿಗ್ಮೆಂಟೇಷನ್ ಎಂದು ಕೆರಯುತ್ತಾರೆ. ಇದು ಎಂತವರಿಗಾದ್ರು ಕಿರಿಕಿರಿ ಉಂಟುಮಾಡುತ್ತದೆ.
ನಮ್ಮ ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡಲಾರಂಭಿಸುತ್ತವೆ. ಈ ಹೈಪರ್ ಪಿಗ್ಮೆಂಟೇಶನ್ ಅಥವಾ ಬಂಗಿಗೆ ಹಲವಾರು ಕಾರಣಗಳಿವೆ. ಸುಡುವ ಸೂರ್ಯನ ಬಿಸಿಲಿಗೆ ಸತತವಾಗಿ ಚರ್ಮವನ್ನು ಒಡ್ಡುವುದು. ಅನುವಂಶೀಯತೆ, ಹಾರ್ಮೋನಲ್ ಬದಲಾವಣೆಗಳು ಮುಖದ ಮೇಲೆ ಬಂಗು ಬರಲು ಕಾರಣವಾಗುತ್ತವೆ. ಇದನ್ನು ಹೋಗಲಾಡಿಸಲು ನಾನಾ ರೀತಿಯ ಕಸರತ್ತುಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಕಾಣುವ ಕೆಲವೊಂದು ಔಷಧಿಗಳನ್ನು ಬಳಸಿ ಮುಖವನ್ನು ಹಾಳು ಮಾಡಿಕೊಂಡ ಘಟನೆ ಅನೇಕ. ಬಂಗು ಅಥವಾ ಹೈ ಪಿಗ್ಮೆಂಟೇಷನ್ ನಿವೇರಿಸಲು ಮನೆಮದ್ದು ಮಾಡುವ ಮೂಲಕ ನಿವಾರಣೆ ಕಂಡುಕೊಳ್ಳಬಹುದು.
ಜಾಯಿಕಾಯಿ:
ಜಾಯಿಕಾಯಿಯನ್ನುಹಸಿ ಹಾಲಿನಲ್ಲಿ ಅರೆದು ಪೇಸ್ಟ್ ಮಾಡಿ ನೀವು ರಾತ್ರಿ ಮಲಗುವ ಮುಂಚೆ ಹಚ್ಚಬಹುದು ಅಥವಾ ಅರ್ಧ ಗಂಟೆ ಪಿಗ್ಮೆಂಟೇಷನ್ ಆಗಿರುವ ಜಾಗಕ್ಕೆ ಹಚ್ಚಿ ಮುಖ ತೊಳೆದುಕೊಳ್ಳಬೇಕು. ಪೇಸ್ಟನ್ನು ಶೇಖರಣೆ ಮಾಡಿ ಇಡಬಾರದು ಆಯಾ ದಿನ ಪೇಸ್ಟನ್ನು ಮಾಡಿ ಹಚ್ಚಬೇಕು. ಒಂದು ತಿಂಗಳು ಈ ರೀತಿ ಮಾಡಿದಲ್ಲಿ ಪಿಗ್ಮೆಂಟೇಷನ್ ಮಾಯವಾಗುತ್ತದೆ.
ಆಪಲ್ ಸೈಡರ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಬೀಟಾ ಕೆರೋಟಿನ್ನ್ನು ಹೊಂದಿದ್ದು ಇದು ನಿಮ್ಮ ಚರ್ಮದ ಮೇಲಿನ ಪಿಗ್ಮೆಂಟೇಶನ್ನನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಚಮಚ ಆಪಲ್ ಸೈಡರ್ ವಿನೆಗರ್ನ್ನು 2 ಚಮಚ ನೀರಿನೊಂದಿಗೆ ಬೆರೆಸಿ ಕಪ್ಪು ಕಲೆಗಳಿರುವ ಜಾಗಕ್ಕೆ ಈ ಮಿಶ್ರಣವನ್ನು ಹಚ್ಚಿ, 5 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ದಿನಕ್ಕೆ ಎರಡು ಬಾರಿ ಹೀಗೆ ಮಾಡಿದರೆ ಬಂಗಿನ ಸಮಸ್ಯೆ ಕಡಿಮೆಯಾಗುತ್ತದೆ.
ಅಲೋವೇರಾ:
ಅಲೋವೇರಾ ಮುಖದ ಸೌಂದರ್ಯವನ್ನು ಹೆಚ್ಚಿಸುವ ನೈಸರ್ಗಿಕ ಮದ್ದು. ಇದರಲ್ಲಿ ಅಲೋಯಿನ್ ಅಂಶ ಇದ್ದು ಬಂಗಿನ ಸಮಸ್ಯೆ ಇರುವವರು ಈ ಅಲೋವೇರಾವನ್ನು ಮುಖಕ್ಕೆ ಹಚ್ಚುವುದರಿಂದ ಕಲೆಯ ಸಮಸ್ಯೆ ಮಾಯವಾಗುತ್ತದೆ. ಮಲಗುವ ಮುನ್ನ ಶುದ್ಧವಾದ ಅಲೋವೇರಾ ಜೆಲ್ನ್ನು ಕಲೆಗಳಿರುವ ಭಾಗಕ್ಕೆ ಹಚ್ಚಿ. ಬೆಳಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ಚರ್ಮದ ಬಣ್ಣ ಸುಧಾರಿಸುವವರೆಗೆ ಪ್ರತಿದಿನ ಹೀಗೆ ಮಾಡಿ.
ಕೆಂಪು ಈರುಳ್ಳಿ:
ವಿಟಮಿನ್ ಸಿ ಹೆಚ್ಚಾಗಿರುವ ಆ್ಯಂಟಿ ಆಕ್ಸಿಡೆಂಟ್ಗಳಲ್ಲಿ ಒಂದಾದ ಕೆಂಪು ಈರುಳ್ಳಿ ಮುಖದ ಮೇಲಿನ ಬಂಗು ನಿವಾರಣೆಗೆ ಉತ್ತಮ ಮನೆ ಮದ್ದು. ಕೆಂಪು ಈರುಳ್ಳಿಯನ್ನು ಕತ್ತರಿಸಿ ಕಪ್ಪು ಕಲೆಗಳಿರುವ ಭಾಗಕ್ಕೆ ದಿನಕ್ಕೆ 2 ಬಾರಿಯಂತೆ ಹಚ್ಚುತ್ತಾ ಬಂದರೆ ಬಂಗಿನ ಸಮಸ್ಯೆ ದೂರವಾಗಿ, ಮುಖ ಕಾಂತಿಯುತವಾಗುತ್ತದೆ.
ಗ್ರೀನ್ ಟೀ:
ಗ್ರೀನ್ ಟೀ ಮುಖದ ಮೇಲಿನ ಕಪ್ಪು ಕಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಬಂಗಿನ ಸಮಸ್ಯೆ ಎದುರಿಸುತ್ತಿದ್ದರೆ, ಗ್ರೀನ್ ಟೀ ಸಾರವನ್ನು ಮುಖಕ್ಕೆ ಹಚ್ಚಬಹುದು. 3-5 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಗ್ರೀನ್ ಟೀ ಬ್ಯಾಗ್ನ್ನು ಕರಗಿಸಿ. ನಂತರ ನೀರಿನಿಂದ ಟೀ ಬ್ಯಾಗ್ನ್ನು ತೆಗೆದು, ಅದು ತಣ್ಣಗಾಗಲು ಬಿಡಿ. ಬಳಿಕ ಮುಖದ ಮೇಲೆ ಕಲೆಗಳಿರುವ ಜಾಗಕ್ಕೆ ಟೀ ಬ್ಯಾಗ್ನ್ನು ಇಡಿ. ಪ್ರತಿದಿನ ಹೀಗೆ ಮಾಡುವುದರಿಂದ ಬಂಗು ಕಡಿಮೆಯಾಗುತ್ತದೆ.
ಪರಂಗಿ ಹಣ್ಣು:
ಪರಂಗಿ ಹಣ್ಣಿನಲ್ಲಿ ಪ್ಯಾಪೇನ್ ಅಂಶವು ಯಥೇಚ್ಚವಾಗಿರುವುದರಿಂದ ಇದು ಪಿಗ್ಮೆಂಟೇಶನ್ ನಿವಾರಣೆಗೆ ಉತ್ತಮ ಮನೆ ಮದ್ದಾಗಿದೆ. ತುರಿದ ಪಪ್ಪಾಯ ಹಣ್ಣಿನ ರಸವನ್ನು ಪ್ರತಿನಿತ್ಯ ಮುಖಕ್ಕೆ ಲೇಪಿಸಿ 10-15 ನಿಮಿಷಗಳ ಕಾಲ ಬಿಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಕಲೆರಹಿತ ಮುಖ ನಿಮ್ಮದಾಗುತ್ತದೆ.
ಹಾಲು:
ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಇರುವುದರಿಂದ ಇದು ಪಿಗ್ಮೆಂಟೇಶನ್ನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಒಂದು ಬಟ್ಟಲಿಗೆ ಸ್ವಲ್ಪ ಹಾಲನ್ನು ಸುರಿದುಕೊಂಡು, ಹತ್ತಿಯ ಉಂಡೆಯನ್ನು ನೆನೆಸಿ. ದಿನಕ್ಕೆ 2 ಬಾರಿ ಹಾಲಿನಲ್ಲಿ ಮಿಂದ ಹತ್ತಿ ಉಂಡೆಯನ್ನು ಮುಖದ ಮೇಲಿನ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿರಿ. ಪ್ರತಿದಿನ ಹೀಗೆ ಮಾಡುವುದರಿಂದ ಕಲೆಗಳು ದೂರಾಗುತ್ತವೆ.