ಎಲ್ಲಿ ನೋಡಿದರಲ್ಲಿ  ಗಾಂಜಾ ವ್ಯಸನಿಗಳು ವ್ಯಸನಿಗಳದ್ದೆ ದರ್ಬಾರು.

Share with


ಸಕಲೇಶಪುರ :ತಾಲೂಕಿನಲ್ಲಿ ಗಾಂಜಾ ವ್ಯಸನಿಗಳು ಹೆಚ್ಚಳ.

ಇವರ ವಿರುದ್ದ ಪೋಲಿಸರು ಕ್ರಮ ಕೈಗೊಳ್ಳಬೇಕು. ಆದರೆ.ಕಣ್ಮುಚ್ಚಿ ಕುಳಿತ ಪೊಲೀಸರು. ಪೋಲಿಸರ ನಿರ್ಲಕ್ಷ್ಯ ಖಂಡಿಸಿ ಬಿಜೆಪಿ ಮುಖಂಡರಿಂದ ಪ್ರತಿಭಟನೆ.

ಗಾಂಜಾ ವ್ಯಸನಿಗಳಿಂದ ಬೆದರಿಕೆ. ಇದರಿಂದ ಜನಸಾಮಾನ್ಯರು ಆತಂಕದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ .ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್  ಹಾಗೂ ಬಿಜೆಪಿ  ಕಾರ್ಯಕರ್ತರು ಪಟ್ಟಣದ ಅಶೋಕ ರಸ್ತೆಯಲ್ಲಿರುವ ನಗರ ಠಾಣೆ ಪೋಲಿಸ್ ಮುಂಭಾಗ  ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾನಹಳ್ಳಿ ಗ್ರಾಮದಲ್ಲಿ ಕೆಲವು ಗಾಂಜಾ ವ್ಯಸನಿಗಳು ಮದ್ಯದ ಬಾಟಲ್‌ಗಳನ್ನು ಬಿಸಾಡಿದ್ದು ಇದನ್ನು ಗ್ರಾಮದ ಯುವಕನೋರ್ವ ಕೇಳಿದ್ದಾನೆ. ಇದನ್ನು ನೆಪವಾಗಿಟ್ಟುಕೊಂಡ ವ್ಯಸನಿಗಳು ಇಂದು ಆ ಯುವಕ ಪಟ್ಟಣಕ್ಕೆ ಬಂದಾಗ ಆತನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂಧರ್ಭದಲ್ಲಿ ಇತರ ಗ್ರಾಮಸ್ಥರು ಅಲ್ಲಿದ್ದರಿಂದ .ಆತನ ಮೇಲೆ ಹಲ್ಲೆಯಾಗುವುದು ತಪ್ಪಿದೆ. ಇದನ್ನು ನಗರ ಠಾಣೆಯಲ್ಲಿ ದೂರು ನೀಡಲು ಹೋದರೆ ಇಲ್ಲಿ ದೂರು ಸ್ವೀಕಾರವಾಗುವುದಿಲ್ಲ, ಗ್ರಾಮಾಂತರ ಠಾಣೆಯಲ್ಲಿ ದೂರು ಕೊಡಿ ಎಂದು ಪೋಲಿಸರು ಹೇಳುತ್ತಾರೆ.

ಪೋಲಿಸರ ನಿರ್ಲಕ್ಷ್ಯತನಕ್ಕೆ  ಕ್ಯಾನಹಳ್ಳಿ ಗ್ರಾಮಸ್ಥರು ಪೋಲಿಸರ ವಿರುದ್ದ ಕೆಲ ನಿಮಿಷಗಳ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ವಳಲಹಳ್ಳಿ ಅಶ್ವಥ್ ಮಾತನಾಡಿ ತಾಲೂಕಿನಲ್ಲಿ ಗಾಂಜಾ ಹಾಗೂ ಡ್ರಗ್ಸ್ ಹಾವಳಿ ವಿಪರೀತವಾಗಿದೆ. ಗಾಂಜಾ ವ್ಯಸನಿಗಳು ತಾಲೂಕಿನ ಎಲ್ಲಾ ಭಾಗಗಳಲ್ಲೂ ಇದ್ದಾರೆ. ಕೆಲವು ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ಗಾಂಜಾ ವ್ಯಸನಿಗಳ ಅಡ್ಡೆಯಾಗಿದೆ. ಗಾಂಜಾ ವ್ಯಸನಿಗಳು ದಾಂದಲೆ ಮಾಡುವಾಗ ಸಾರ್ವಜನಿಕರು ಇದನ್ನು ಕೇಳಲು ಹೋದರೆ ಮದ್ಯದ ಬಾಟಲಿಗಳನ್ನು ಒಡೆದು ಹೆದರಿಸುತ್ತಾರೆ. ಇದರಿಂದಾಗಿ ಸಾರ್ವಜನಿಕರು ಗಾಂಜಾ ವ್ಯಸನಿಗಳ ವಿರುದ್ದ ದೂರು ಕೊಡಲು ಅಂಜುವಂತಾಗಿದೆ ತಾಲೂಕಿನಲ್ಲಿ ಗಾಂಜಾ ಹಾಗೂ ಡ್ರಗ್ಸ್ ಪೂರೈಕೆ ಸಂಪೂರ್ಣವಾಗಿ ನಿಲ್ಲಬೇಕು ಹಾಗೂ ಗಾಂಜಾ ವ್ಯಸನಿಗಳ ವಿರುದ್ದ ಪೋಲಿಸರು ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ತಾಲೂಕಿನಲ್ಲಿ ಮುಂದೆ ಆಗುವ ಅನಾಹುತಗಳಿಗೆ ಪೋಲಿಸ್ ಇಲಾಖೆ ನೇರ ಹೊಣೆಯಾಗಿರುತ್ತದೆ ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರುಗಳು, ಕ್ಯಾಮನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *