
ಪುಣೆ, ಮೇ 12: ಪಹಲ್ಗಾಮ್ (pahalgam) ಕೃತ್ಯಕ್ಕೆ ಪ್ರತೀಕಾರವಾಗಿ ಯೋಧರು ‘ಆಪರೇಷನ್ ಸಿಂಧೂರ’ (operation sindoor) ನಡೆಸಿ ಉಗ್ರರ ನೆಲೆ ನಾಶ ಮಾಡಿದ್ದಾರೆ. ಆದರೆ ಈ ಬೆನ್ನಲೇ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಭಾರತದಲ್ಲಿ ನೆಲೆಸಿರುವ ಕೆಲವರು ಪಾಕ್ ಗೆ ಬೆಂಬಲ ಸೂಚಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಪುಣೆಯ ಕರ್ವೆ ನಗರದಲ್ಲಿ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನ (palestine and pakistan) ವನ್ನು ಬೆಂಬಲಿಸುವ ಇಬ್ಬರು ದೇಶದ್ರೋಹಿಗಳನ್ನು ಸ್ಥಳೀಯ ನಾಗರಿಕರು ಥಳಿಸಿದ್ದಾರೆ. ಹೌದು, ಪ್ಯಾಲೆಸ್ಟೈನ್ ಹಾಗೂ ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಕರಪತ್ರಗಳನ್ನು ವಿತರಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.





