ಕರಾಚಿ: ಹೆಣ್ಣು ಮಕ್ಕಳ ರಕ್ಷಣೆ ಅಣ್ಣ, ತಮ್ಮ,ಗಂಡ, ತಂದೆಯಿಂದಿಡಿದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯ. ಆದರೆ ಇಲ್ಲೊಬ್ಬ ತಂದೆ ತನ್ನ ಮಗಳ ರಕ್ಷಣೆಗಾಗಿ ಕೈಗೊಂಡ ಕ್ರಮ ನೋಡಿದರೆ ಒಮ್ಮೆ ಅಚ್ಚರಿ ಆಗುವುದು ಖಂಡಿತ.
ಯುವತಿಯೊಬ್ಬಳ ತಲೆ ಮೇಲೆ ತಂದೆಯೊಬ್ಬ ಸಿಸಿಟಿವಿ ಅಳವಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ವಿಡಿಯೋವೆಂದು ಹೇಳಲಾಗುತ್ತಿದ್ದು, ತಂದೆ ತನ್ನ ಮಗಳ ರಕ್ಷಣೆಗಾಗಿ ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಯಾಕೆ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಯುವತಿ, “ನನ್ನ ತಂದೆ ಇದನ್ನು ಆಳವಡಿಸಿದ್ದಾರೆ. ಇದರಿಂದ ಅವರಿಗೆ ನಾನು ಎಲ್ಲಿಗೆ ಹೋಗುತ್ತಿದ್ದೇನೆ. ಏನು ಮಾಡುತ್ತಿದ್ದೇನೆ ಎನ್ನುವುದು ಎಲ್ಲವೂ ಗೊತ್ತಾಗುತ್ತದೆ. ಈ ರೀತಿ ಅವರು ಮಾಡುವುದನ್ನು ನಾನು ವಿರೋಧಿಸಿಲ್ಲ” ಎಂದು ಯುವತಿ ಹೇಳಿದ್ದಾಳೆ.