
ಅಮರನಾಥ ಯಾತ್ರೆಗೆ ಮೊದಲ ತಂಡ ಇಂದು ಬೆಳಗ್ಗೆ ಜಮ್ಮುವಿನಿಂದ ಹೊರಡಲಿದೆ.

ಪಹಲ್ಲಾಮ್ನ ಭಯೋತ್ಪಾದಕ ದಾಳಿಯ ಹಿನ್ನೆಲೆ, ಭಕ್ತರು ಭದ್ರತೆಯ ನಡುವೆ ಯಾತ್ರೆಯನ್ನು ಮುಂದುವರಿಸಲಿದ್ದಾರೆ. 38 ದಿನಗಳ ಕಾಲ ನಡೆಯುವ ಈ ಯಾತ್ರೆಯನ್ನು ನಾಳೆ J&K ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ಯಾತ್ರಾರ್ಥಿಗಳಿಗಾಗಿ ಪಹಲ್ಲಾಮ್, ಬಲ್ತಾಲ್ನಲ್ಲಿ ಬೇಸ್ ಕ್ಯಾಂಪ್ಸ್ ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರವು 600 ಹೆಚ್ಚುವರಿ ಕಂಪನಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಿದೆ.




