
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಮೀನುಗಾರನಿಗೆ ಸಮುದ್ರದ ಮಧ್ಯದಲ್ಲಿ ಹೃದಯಾಘಾತವಾದ ಘಟನೆ ನಡೆದಿದೆ. ಪಣಂಬೂರು ತೀರದಿಂದ ಬೇಬಿ ಮೇರಿ ಬೋಟ್ ನಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ವಸಂತ ಎಂಬವರಿಗೆ ಹೃದಯಾಘಾತವಾಗಿ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ವೇಳೆ ಇತರ ಬೋಟಿನ ಮೀನುಗಾರರು ಕೋಸ್ಟ್ ಗಾರ್ಡ್ ಗೆ ತುರ್ತು ಕರೆ ಮಾಡಿ ತಿಳಿಸಿದ್ದರು.
ಬಳಿಕ ವಸಂತ ಅವರಿಗೆ ಸಮುದ್ರ ಮಧ್ಯದಲ್ಲೇ ಪ್ರಥಮ ಚಿಕಿತ್ಸೆ ನೀಡಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ದಡಕ್ಕೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಮೀನುಗಾರ ಚೇತರಿಸಿಕೊಂಡಿದ್ದಾರೆ.